ಕುಂಡಡ್ಕ‌ : ಶ್ರೀ ಆದಿಬ್ರಹ್ಮ ಮೊಗೇರ್ಕಳ, ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ಸಾನಿಧ್ಯಕ್ಕೆ ಮೇಲ್ಛಾವಣಿ ಕೊಡುಗೆ |
ಸೇವಾ ದಾನಿ ಯತೀಶ್ ಕಾನಾವುಜಾಲು ಅವರಿಗೆ ಕ್ಷೇತ್ರದ ವತಿಯಿಂದ ಗೌರವಾರ್ಪಣೆ

Share the Article

ಸುಳ್ಯ : ಪೆರುವಾಜೆ ಗ್ರಾಮದ ಕುಂಡಡ್ಕ ಶ್ರೀ ಮೊಗೇರ ದೈವಸ್ಥಾನ, ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ಸಾನಿಧ್ಯದಲ್ಲಿ ಶ್ರೀ ಆದಿ ಬ್ರಹ್ಮ ಮೊಗೇರ್ಕಳ‌, ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ನೇಮೋತ್ಸವ ಕಾರ್ಯಕ್ರಮವು ಡಿ.18 ರಿಂದ ಪ್ರಾರಂಭಗೊಂಡಿದ್ದು ಕ್ಷೇತ್ರದ ಸಾನಿಧ್ಯಕ್ಕೆ ಮೇಲ್ಛಾವಣಿಯನ್ನು ಸೇವಾರೂಪದಲ್ಲಿ ನೀಡಿದ ಪ್ರತಿಷ್ಠಿತ ಕಾನಾವುಜಾಲು ತರವಾಡಿನ ಯತೀಶ್ ಕಾನಾವುಜಾಲು ಅವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕುಂಡಡ್ಕ ಶ್ರೀ ಮೊಗೇರ ದೈವಸ್ಥಾನ, ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ಸಂಚಾಲಕ ಉಮೇಶ್ ಕೆಎಂಬಿ, ಕಾರ್ಯದರ್ಶಿ ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಕೋಶಾಧಿಕಾರಿ ಕುಶಾಲಪ್ಪ ಗೌಡ ಪೆರುವಾಜೆ, ಆರ್ಥಿಕ ಸಮಿತಿಯ ದಯಾನಂದ ರೈ ಕನ್ನೆಜಾಲು, ಜಯಂತ ಗೌಡ ಕುಂಡಡ್ಕ, ಅನುವಂಶಿಕ ಆಡಳಿತದಾರ ಗುರುವ ಕುಂಡಡ್ಕ, ಆಡಳಿತ ಸಮಿತಿ ಅಧ್ಯಕ್ಷ ಚನಿಯ ಕುಂಡಡ್ಕ, ಉಪಾಧ್ಯಕ್ಷ ಕೃಷ್ಣಪ್ಪ ಕುಂಡಡ್ಕ, ಕಾರ್ಯದರ್ಶಿ ವಾಸು ಕುಂಡಡ್ಕ, ಜತೆ ಕಾರ್ಯದರ್ಶಿ ಪುರುಷೋತ್ತಮ ಕುಂಡಡ್ಕ ಮೊದಲಾದವರು ಉಪಸ್ಥಿತರಿದ್ದರು.

Leave A Reply