ಕಡಬ: ಮನೆಯೊಳಗೆ ಮಲಗಿದ್ದಲ್ಲಿಯೇ ಮೃತಪಟ್ಟ ನಿವೃತ್ತ ಯೋಧ

Share the Article

ನಿವೃತ್ತ ಸೈನಿಕರೋರ್ವರು ಮನೆಯೊಳಗಡೆ ಮಲಗಿದ್ದಲ್ಲಿಯೇ ಮೃತಪಟ್ಟಿರುವ ಘಟನೆ ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಕುದುಂಬೂರು ಸಮೀಪ ನಡೆದಿದೆ.

ಮೃತರನ್ನು ಮೂಲತ: ಸೂಜಿಬಾಲ ಕನ್ನರೆ ಸಮೀಪದ ವೇಳೆಕಲ್ ನಿವಾಸಿ ನಿವೃತ್ತ ಸೈನಿಕ ಯೋಹಾನ್(50) ಎಂದು ಗುರುತಿಸಲಾಗಿದೆ.

ಯೋಹಾನ್ ಅವರು ಕಳೆದ ರಾತ್ರಿಯೇ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಇವರು ಮನೆಯಲ್ಲಿ ಒಬ್ಬರೇ ಇದ್ದು ಮನೆಯ ಎದುರಿನ ಲೈಟ್ ಉರಿಯುತ್ತಿದ್ದು, ಚಿಲಕ ಹಾಕಿದ್ದರಿಂದ ಸ್ಥಳೀಯರಿಗೆ ಸಂಶಯ ಬಂದು ಬಾಗಿಲು ತೆಗೆದು ನೋಡಿದಾಗ ಮೃತಪಟ್ಟಿರುವುದು ದೃಢಪಟ್ಟಿದೆ.

Leave A Reply