ಕಡಬ : ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ

Share the Article

ಕಡಬ: ಮನೆಗೆ ಬೀಗ ಹಾಕಿ ಹೊರಗೆ ತೆರಳಿದ್ದ ವೇಳೆ ಮನೆಯ ಕಪಾಟಿನಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದಲ್ಲಿ ನಡೆದಿದೆ.

ರೆಂಜಿಲಾಡಿ ಗ್ರಾಮದ ಕಾಜರಕಟ್ಟೆ ವರ್ಗೀಸ್ ಎಂಬವರ ಮನೆಯಿಂದ ಕಳವು ನಡೆಸಲಾಗಿದೆ. ವರ್ಗೀಸ್ ಹಾಗೂ ಅವರ ಪತ್ನಿ ಅವರು ಡಿ.13ರಂದು ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದರು ಅಲ್ಲದೆ ಮಕ್ಕಳು ಶಾಲೆಗೆ ತೆರಳಿದ್ದರು ಎನ್ನಲಾಗಿದೆ.

ಸಂಜೆಯ ವೇಳೆ ವರ್ಗೀಸ್ ಅವರ ಹೆಂಡತಿ ಮನೆಯ ಬಾಗಿಲು ತೆರೆದು ನೋಡಿದಾಗ ಬಟ್ಟೆ ಬರೆಗಳು ಚೆಲ್ಲಾಪಿಲ್ಲಿಯಾಗಿದ್ದು ಕಳವು ನಡೆದಿರುವುದು ಗೊತ್ತಾಗಿದೆ. ಹಿಂಬದಿ ಬಾಗಿಲಿಂದ ಒಳ ನುಗ್ಗಿರುವ ಕಳ್ಳರು ಮಲಗುವ ಕೋಣೆಯ ಗೋಡ್ರೇಜ್ ಬಾಗಿಲನ್ನು ಆಯುಧದಿಂದ ಬಲತ್ಕಾರವಾಗಿ ಮುರಿದು ಅಲ್ಲಿ ಇರಿಸಿದ್ದ ಒಟ್ಟು 1.50 ಲಕ್ಷ ರೂಪಾಯಿ ಮೌಲ್ಯದ 41 ಗ್ರಾಂ ಚಿನ್ನಾಭರಣ ಕದ್ದಿದ್ದಾರೆ ಎಂದು ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಕಡಬ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply