ಪ್ರಿಯಕರನ ಜತೆ ಮದುವೆಯಾಗಲು ಅತ್ಯಾಚಾರ ಕಥೆ ಕಟ್ಟಿದ ಯುವತಿ

Share the Article

ಯುವತಿಯೊಬ್ಬಳು ಪ್ರೀತಿಸಿದ ಯುವಕನ ಜತೆ ಮದುವೆಯಾಗಲು ಅತ್ಯಾಚಾರ ಕಥೆಕಟ್ಟಿದ ಘಟನೆ ನಾಗಪುರದಲ್ಲಿ ನಡೆದಿದೆ.

ಈ ಅತ್ಯಾಚಾರ ಕಥೆಯಿಂದ ನಾಗ್ಪುರದಲ್ಲಿ ಇಡೀ ಪೊಲೀಸ್ ಇಲಾಖೆ ತಲೆಕೆಡಿಸಿಕೊಂಡಿತು.

ಸಂಗೀತ ತರಗತಿಗೆ ಹಾಜರಾಗಲು ತೆರಳುತ್ತಿದ್ದ ವೇಳೆ ವಿಳಾಸ ಕೇಳಿ ಕೊಂಡು ಕಾರಿನಲ್ಲಿ ಬಂದ ಯುವಕರು ನನ್ನನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದರು ಎಂದು ಯುವತಿಯೊಬ್ಬಳು ನಾಗುರ ನಗರ ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪೊಲೀಸ್ ಆಯುಕ್ತರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ,ವಿಶೇಷ ತನಿಖಾ ತಂಡ ರಚಿಸಿ ತನಿಖೆ ಆರಂಭಿಸಿದರು.ವಿವಿಧ ಆಯಾಮಗಳಿಂದ ತನಿಖೆನಡೆಸಿದಾಗ ಇದೊಂದು ಕಟ್ಟು ಕಥೆ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದರು.

ಈ ಕುರಿತು ಯುವತಿಯನ್ನು ಮತ್ತೊಮ್ಮೆ ವಿಚಾರಿಸಿದಾಗ ನಾನು ಪ್ರೀತಿಸುವ ಯುವಕನನ್ನು ಮದುವೆಯಾಗಲು ಈ ನಾಟಕ ಮಾಡಿದ್ದೆ ಎಂದು ಯುವತಿ ಒಪ್ಪಿಕೊಂಡಿದ್ದಾಳೆ

Leave A Reply