Home News ಪತಿ ಪ್ರೀತಿಸಿದ್ದು ಅತಿಯಾಯಿತು ಎಂದು ಆತ್ಮಹತ್ಯೆ ಮಾಡಿಕೊಂಡ ಸಾಫ್ಟವೇರ್ ಸತಿ | ಹೀಗೂ ಇರ್ತಾರೆ ಜನ...

ಪತಿ ಪ್ರೀತಿಸಿದ್ದು ಅತಿಯಾಯಿತು ಎಂದು ಆತ್ಮಹತ್ಯೆ ಮಾಡಿಕೊಂಡ ಸಾಫ್ಟವೇರ್ ಸತಿ | ಹೀಗೂ ಇರ್ತಾರೆ ಜನ ನೋಡಿ !!

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರಿನ ಅಮೃತಹಳ್ಳಿ ವೀರಣ್ಣಪಾಳ್ಯ ನಿವಾಸಿಯಾಗಿದ್ದ, ಮಹಿಳಾ ಟೆಕ್ಕಿ ಸಂಗೀತಾ ಆತ್ಮಹತ್ಯೆ ಪ್ರಕರಣಕ್ಕೆ ಬಹುದೊಡ್ಡ ಟ್ವಿಸ್ಟ್ ಸಿಕ್ಕಿದೆ. ಸಂಗೀತಾ ಡಿಸೆಂಬರ್ 10ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಸಂಗೀತಾ ಪತಿ ವಿನಯ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಆ ಹೇಳಿಕೆ ತೀವ್ರ ಕೂತೂಹಲ ಕೆರಳಿಸಿದ್ದು, ಹೀಗೂ ಉಂಟೇ ಎಂಬ ಪ್ರಶ್ನೆ ಉದ್ಭವಿಸಿದೆ.

ಡಿಸೆಂಬರ್ 10ರಂದು ಸಂಗೀತಾ ಆತ್ಮಹತ್ಯೆಗೆ ಶರಣಾಗಿದ್ದ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿತ್ತು. ಪತ್ರದಲ್ಲಿ ಪತಿಯ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರೋದಾಗಿ ಆಕೆಯ ಹೆಸರಿನಲ್ಲಿ ಇಟ್ಟಿದ್ದ ಪತ್ರದಲ್ಲಿ ಬರೆಯಲಾಗಿದೆ ಎಂದು ತಿಳಿದು ಬಂದಿತ್ತು. ಆದರೆ ಪೊಲೀಸರು ಆ ಪತ್ರವನ್ನು ತಕ್ಷಣ ರಿವೀಲ್ ಮಾಡಿರಲಿಲ್ಲ.

ಈ ಪತ್ರದ ಆಧಾರದ ಮೇಲೆಯೇ ಪತಿ ವಿನಯ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ವಿನಯ್ ತನ್ನ ಮತ್ತು ಸಂಗೀತಾ ನಡುವಿನ ಮದುವೆ, ಅದರ ಹಿಂದೆ ಇದ್ದ ಪ್ರೀತಿಯ ವಿಷಯವನ್ನು ಬಿಚ್ಚಿಟ್ಟಿದ್ದಾನೆ. ಪೋಲೀಸರು ಆತನ ಮಾತು ಕೇಳಿ ಬೆಪ್ಪಾಗಿದ್ದಾರೆ.

ವಿನಯ್ ಮತ್ತು ಸಂಗೀತಾ ಇಬ್ಬರು ಇಂಜಿನೀಯರ್ ಗಳಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು, ವೀರಣ್ಣ ಪಾಳ್ಯದಲ್ಲಿ ವಾಸವಾಗಿದ್ದರು. ನಾಲ್ಕು ವರ್ಷದ ಪ್ರೀತಿಯ ನಂತರ ಸಂಗೀತಾ ಮತ್ತು ವಿನಯ್ ಮದುವೆ ಆಗಿದ್ದರು. ಆತ ಪತ್ನಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ. ವಿನಯ್ ನು ತನ್ನ ಮಡದಿಯ ಹೆಸರನ್ನು ಕೈ ಮೇಲೆ ಟ್ಯಾಟೂ ಕೂಡಾ ಹಾಕಿಸಿಕೊಂಡಿದ್ದನು. ಆಕೆಯನ್ನು ಆತ ತೀರಾ ಪ್ರೀತಿಸುತ್ತಿದ್ದ. ಆ ವಿಪರೀತದ ಪ್ರೀತಿಯೇ ಆತನ ಪಾಲಿಗೆ ಆಕೆ ಇಲ್ಲವಾಗುವ ಹಾಗೆ ಆಗಿದೆ !!

ಇದೀಗ ವಿನಯ್ ಪೊಲೀಸರ ಮುಂದೆ ನೀಡಿರುವ ಹೇಳಿಕೆ ಪ್ರಕರಣವನ್ನು ಮತ್ತೊಂದು ಹೊಸ ಆಯಾಮಕ್ಕೆ ತೆರೆದುಕೊಳ್ಳುವಂತೆ ಮಾಡಿದೆ. ಪತ್ನಿ ನನ್ನಿಂದ ದೂರವಾಗಬಾರದು ಅಂತ ಅತಿಯಾಗಿ ಪ್ರೀತಿಸುತ್ತಿದ್ದೆ. ಆಕೆಯ ಹೆಸರನ್ನು ಕೈಮೇಲೆ ಕೆತ್ತಿಸಿಕೊಂಡಿದ್ದೆ. ನನ್ನ ಅತಿಯಾದ ಪ್ರೀತಿಗೆ ಬೇಸತ್ತು ಆಕೆ ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂಬ ಸಣ್ಣ ಸುಳಿವು ಕೂಡಾ ಇರಲಿಲ್ಲ ಎಂಬುದಾಗಿ ವಿನಯ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ನಿಜಕ್ಕೂ ಆತನ ಉಸಿರು ಕಟ್ಟಿಸುವ ಪೊಸೆಸಿವ್ ಪ್ರೀತಿ ಆಕೆಯ ಉಸಿರು ನಿಲ್ಲಿಸಿತ್ತಾ ಅನ್ನುವುದು ಪೊಲೀಸರ ಕಡೆಯಿಂದ ಇನ್ನೂ ಕನ್ಫರ್ಮ್ ಆಗಿಲ್ಲದೇ ಇದ್ದರೂ, ಅದೇ ಕಾರಣ ಎನ್ನಲಾಗುತ್ತಿದೆ. ಪ್ರೀತಿ ನಿರಾಕರಿಸಿದ ಕಾರಣಕ್ಕೆ ಸತ್ತವರಿದ್ದಾರೆ. ಪ್ರೀತಿ ದೊರಕದ ಕಾರಣಕ್ಕೆ ಸಾವನ್ನು ಬರಮಾಡಿಕೊಂಡವರನ್ನು ನೋಡಿದ್ದೇವೆ. ಈಗ ಆತಿ ಪ್ರೀತಿಯ ಕಾರಣದಿಂದ ಒಂದು ಜೀವ ಬಿದ್ದಿದೆ.