ಉಪ್ಪಿನಂಗಡಿ: ತನ್ನ ಜಾಗದ ಹಣ ಕೇಳಿದ್ದಕ್ಕೆ ವೃದ್ಧೆ ಮೇಲೆ ದೊಣ್ಣೆಯಿಂದ ಹಲ್ಲೆ, ದೂರು ದಾಖಲು

Share the Article

ತನಗೆ ಬರಬೇಕಾದ ಜಾಗದ ಹಣವನ್ನು ಕೇಳಿದಕ್ಕೆ ವ್ಯಕ್ತಿಯೊಬ್ಬ ವೃದ್ಧೆಗೆ ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಬಜತ್ತೂರು ಗ್ರಾಮದ ಹಿರ್ತಿಲ ನಿವಾಸಿ ಆಮಿನಾ ಹಲ್ಲೆಗೆ ಒಳಗಾಗಿರುವ ವೃದ್ಧೆ. ಹಲ್ಲೆ ನಡೆಸಿರುವ ಆರೋಪಿ ಬಜತ್ತೂರು ಗ್ರಾಮದ ವಳಾಲು ಸಮೀಪದ ಹಿರ್ತಿಲ ನಿವಾಸಿ ಬಿ.ಹೆಚ್‌ ಅಬೂಬಕ್ಕರ್ ಎಂದು ತಿಳಿದು ಬಂದಿದೆ. ಹಲ್ಲೆಗೆ ಒಳಗಾಗಿರುವ ವೃದ್ಧೆ ಇದೀಗ ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವರಿಬ್ಬರಿಗೂ ಜಾಗದ ತಕರಾರು ಇತ್ತೆನ್ನಲಾಗಿದ್ದು, ಈ ಸಂಬಂಧ ಜಾಗದ ಹಣ ಕೊಡುವಂತೆ ಅಬೂಬಕ್ಕರ್ ಬಳಿ ಆಮಿನಾ ಕೇಳಿದಾಗ ಕೊಂದು ಬಿಡುವುದಾಗಿ ಹೇಳಿ ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ ಆಮಿನಾ ಉಪ್ಪಿನಂಗಡಿ ಪೊಲೀಸರಿಗೆ ನೀಡಿದ್ದಾರೆ.

ಉಪ್ಪಿನಂಗಡಿ ಪೊಲೀಸರು ಈ ಬಗ್ಗೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave A Reply