ಸ್ನೇಹಿತೆಯೊಂದಿಗೆ ತಿರುಗಾಡಲು ಹೋಗಿದ್ದ ಯುವಕನಿಗೆ ನಿಂದನೆ,ಬೆದರಿಕೆ | ಮೂವರ ವಿರುದ್ದ ದೂರು

Share the Article

ಉಡುಪಿ : ಸ್ನೇಹಿತೆಯೊಂದಿಗೆ ತಿರುಗಾಡಲು ಹೋಗಿದ್ದ ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವ ಘಟನೆ ಮಣಿಪಾಲದ ಮಣ್ಣಪಳ್ಳದ ಗೇಟ್ ಬಳಿ ನಡೆದಿದೆ.

ಈ ಕುರಿತು ಸಾಲಿಗ್ರಾಮದ ಅಲ್ತಾಫ್ (27) ಎಂಬವರು ಪ್ರಾಣೇಶ್, ವಿನೂತ್ ಪೂಜಾರಿ, ಸಂಜಯ ಕುಮಾರ್ ಎಂಬವರ ವಿರುದ್ಧ ಮಣಿಪಾಲ್ ಪೊಲೀಸರಿಗೆ ದೂರು ನೀಡಿದ್ದಾರೆ.

ಅಲ್ತಾಫ್ ಅವರು ಮಧ್ಯಾಹ್ನದ ವೇಳೆಗೆ ತನ್ನ ಮನೆಯ ಪಕ್ಕದ ಮನೆಯ ಸ್ನೇಹಿತೆಯೊಂದಿಗೆ ತಿರುಗಾಡಲು ಮಣಿಪಾಲದ ಮಣ್ಣಪಳ್ಳದ ಗೇಟ್ ಬಳಿ ಹೋಗಿದ್ದರು.

ಈ ವೇಳೆ ಆರೋಪಿಗಳಾದ ಪ್ರಾಣೇಶ್, ವಿನೂತ್ ಪೂಜಾರಿ ಮತ್ತು ಸಂಜಯ್ ಕುಮಾರ್ ಇವರಿಬ್ಬರನ್ನು ತಡೆದು ಅಲ್ತಾಫ್ ರನ್ನು ತಳ್ಳಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ.

Leave A Reply