ತಬ್ಲಿಖಿ ಜಮಾತ್ ನಿಷೇಧ ಮಾಡಿ ಬಿಸಾಕಿದ ಮುಸ್ಲಿಂ ಸಾಂಪ್ರಾದಾಯಿಕ ರಾಷ್ಟ್ರ

Share the Article

ಸೌದಿ ಅರೇಬಿಯಾ : ಇಸ್ಲಾಮಿಕ್ ಸಾಂಪ್ರದಾಯಿಕ ದೇಶ ಎನಿಸಿಕೊಂಡಿರುವ ಸೌದಿ ಅರೇಬಿಯಾವು ತಬ್ಲಿಘಿ ಜಮಾತ್ ಇಸ್ಲಾಮಿಕ್ ಧಾರ್ಮಿಕ ಸಂಘಟನೆಯನ್ನ ನಿಷೇಧಿಸಿದೆ.

ಭಯೋತ್ಪಾದನೆಯ ಬಾಗಿಲು ಆಗಿದೆ ಎಂದು ತಬ್ಲಿಘಿ ಜಮಾತ್ ಸಂಘಟನೆಯನ್ನು ಬಣ್ಣಿಸಿರುವ ಸೌದಿ ಸರ್ಕಾರವು ತಬ್ಲಿಘಿ ಜಮಾತ್ ಸಂಘಟನೆಯಿಂದ ಜನರನ್ನು ದೂರವಿರುವಂತೆ ನಿರ್ದೇಶಿಸಿದೆ.

ಮುಂದಿನ ಶುಕ್ರವಾರದಂದು ಎಲ್ಲಾ ಮಸೀದಿಗಳಲ್ಲೂ ತಬ್ಲಿಘಿ ಜಮಾತ್ ಸಂಘಟನೆ ವಿರುದ್ಧ ಜನರಿಗೆ ಅರಿವು ಮೂಡಿಸಬೇಕೆಂದು ಧರ್ಮ ಬೋಧಕರಿಗೆ ಸೌದಿ ಸರ್ಕಾರ ಸೂಚಿಸಿದೆ.

ತಬ್ಲಿಘಿ ಜಮಾತ್ ಅನ್ನು ನಿಷೇಧ ಮಾಡಿರುವ ವಿಚಾರವನ್ನು ಸೌದಿ ಅರೇಬಿಯಾದ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ಟ್ವೀಟ್ ಮಾಡುವ ಮೂಲಕ ಬಹಿರಂಗಗೊಳಿಸಿದೆ.

ಶುಕ್ರವಾರದ ನಮಾಜ್ ವೇಳೆ ತಬ್ಲಿಘಿ ಮತ್ತು ದವಾಹ ಸಂಘಟನೆಗಳ ವಿರುದ್ಧ ಜಾಗೃತಿ ಮೂಡಿಸಲು ಎಲ್ಲಾ ಮಸೀದಿಗಳಲ್ಲಿ ತಾತ್ಕಾಲಿಕವಾಗಿ ಸಮಯ ನಿಯೋಜಿಸಬೇಕು ಎಂದು ಧರ್ಮ ಬೋಧಕರಿಗೆ ಸಚಿವ ಅಬ್ದುಲ್ ಅತಿಫ್ ಅಲ್ ಶೇಖ್ ಅವರು ನಿರ್ದೇಶಿಸಿದ್ದಾರೆ ಎಂದು ಸಚಿವಾಲಯದ ಟ್ವೀಟ್​ನಲ್ಲಿ ತಿಳಿಸಲಾಗಿದೆ.

Leave A Reply