ಮಂಗಳೂರು :ಲಾಲ್ ಭಾಗ್ ವೃತ್ತದ ಬಳಿ ವ್ಯಕ್ತಿಯೊಬ್ಬರ ಪರ್ಸ್, ಮೊಬೈಲ್ ಎಗರಿಸಿ ಕಳ್ಳ ಪರಾರಿ

Share the Article

ಮಂಗಳೂರು : ನಗರದ ಲಾಲ್ ಭಾಗ್ ವೃತ್ತದ ಬಳಿ ಕಳ್ಳನೊಬ್ಬ ವ್ಯಕ್ತಿಯೊಬ್ಬರ ಪರ್ಸ್ ಮತ್ತು ಮೊಬೈಲ್ ಎಗರಿಸಿ ಪರಾರಿಯಾದ ಘಟನೆ ನಡೆದಿದೆ.

ಇಂದು ಮಧ್ಯಾಹ್ನ ಎರಡು ಗಂಟೆಯ ವೇಳೆಗೆ ಈ ಕಳ್ಳತನ ನಡೆದಿದ್ದು,ಸಾರ್ವಜನಿಕರು ಬೆನ್ನಟ್ಟಿದರೂ ಕಳ್ಳನನ್ನು ಹಿಡಿಯಲು ಸಾಧ್ಯವಾಗಿಲ್ಲ.

ಲಾಲ್ ಬಾಗ್ ವೃತ್ತದ ಬಳಿಯ ಸಿಸಿ ಕ್ಯಾಮೆರಾದಲ್ಲಿ ಕಳ್ಳನ ಚಹರೆ ಪತ್ತೆಯಾಗಬಹುದು. ಬಿಳಿ ಶರ್ಟ್ ಧರಿಸಿದ್ದ ಯುವಕನ ವಯಸ್ಸು ಸುಮಾರು 25 ರಿಂದ 30 ಇರಬಹುದು ಎಂದು ಹೇಳಲಾಗಿದೆ.ಕಳ್ಳನನ್ನು ಬಿಗ್ ಬಜಾರ್ ಕಡೆಯಿಂದ ಲಾಲ್ ಬಾಗ್ ವೃತ್ತದವರೆಗೆ ಬೆನ್ನಟ್ಟಲಾಗಿದೆ ಎಂದು ತಿಳಿದು ಬಂದಿದ್ದು,ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

Leave A Reply