ಕೇರಳದಲ್ಲಿ ಕಾಣಿಸಿಕೊಂಡ ಹಕ್ಕಿ ಜ್ವರ | ಕುಕ್ಕುಟೋದ್ಯಮಕ್ಕೆ ಮತ್ತೆ ಎದುರಾಗಿದೆ ಆತಂಕ
ತಿರುವನಂತಪುರಂ: ಕೇರಳದಲ್ಲಿ ಹಕ್ಕಿ ಜ್ವರ ಇರುವುದು ದೃಢಪಟ್ಟಿದೆ. ಕೇರಳದ ಕುಟ್ಟನಾಡು ಭಾಗದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ.
ಈ ಕುರಿತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಿರುವನಂತಪುರ ಜಿಲ್ಲಾಡಳಿತಕ್ಕೆ ರಾಜ್ಯಸರಕಾರ ಸೂಚನೆ ನೀಡಿದೆ.ಹಕ್ಕಿ ಜ್ವರ ಹಿನ್ನೆಲೆಯಲ್ಲಿ ಕುಟ್ಟನಾಡಿನ 12 ಕಿಲೋ ವ್ಯಾಪ್ತಿ ಪ್ರದೇಶದಲ್ಲಿ ಕಠಿಣ ನಿರ್ಬಂಧ ಕ್ರಮಗಳನ್ನು ಜಾರಿ ಮಾಡಲಾಗಿದೆ. ಕೋಳಿ ಹಾಗೂ ಬಾತು ಕೋಳಿಗಳ ಸಾಗಾಟಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ.
ಹಕ್ಕಿ ಜ್ವರ ಇತರ ಪ್ರದೇಶಗಳಿಗೆ ಹರಡುವುದನ್ನು ತಡೆಗಟ್ಟುವುದಕ್ಕಾಗಿ ಈ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದ್ದು,ರೋಗ ನಿರ್ಮೂಲನ ಹಾಗೂ ತಡೆಗಟ್ಟುವಿಕೆಗೆ ನಮ್ಮ ಮೊದಲ ಆದ್ಯತೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಕ್ಕಿಜ್ವರ ಹಿನ್ನೆಲೆಯಲ್ಲಿ ಕುಕ್ಕುಟೋದ್ಯಮಕ್ಕೆ ಬಲವಾದ ಹೊಡೆತ ಬೀಳಲಿದೆ.ಇದು ಕುಕ್ಕುಟೋದ್ಯಮ ಹಾಗೂ ಫಾರಂ ಮಾಲಿಕರಿಗೆ ದೊಡ್ಡ ಹೊಡೆತ ಬೀಳಲಿದೆ.