Home Interesting ಇಲ್ಲೊಂದು ಕಡೆ ಸಂಗೀತ ಒಬ್ಬ ವ್ಯಕ್ತಿಯನ್ನೇ ಕೊಂದು ಹಾಕಿದೆ !! | ಹೇಗೆ ಗೊತ್ತೇ ?!

ಇಲ್ಲೊಂದು ಕಡೆ ಸಂಗೀತ ಒಬ್ಬ ವ್ಯಕ್ತಿಯನ್ನೇ ಕೊಂದು ಹಾಕಿದೆ !! | ಹೇಗೆ ಗೊತ್ತೇ ?!

Hindu neighbor gifts plot of land

Hindu neighbour gifts land to Muslim journalist

ಯಾವುದೇ ಮೂಲೆಯಿಂದ ಆದರೂ ಸಂಗೀತ ಕೇಳಿಬರುತ್ತಿದೆ ಅಂದರೆ ಅದನ್ನ ಕೇಳುತ್ತ ರೋಮಾಂಚನಗೊಳ್ಳುತ್ತೇವೆ. ಒಂದು ಬಾರಿ ಕೂತು ಆನಂದಿಸೋಣ ಎಂದೆನಿಸುತ್ತದೆ.ಆದರೆ ಇಲ್ಲಿ ಸುಮಧುರವಾದ ಸಂಗೀತ ಒಬ್ಬ ವ್ಯಕ್ತಿಯನ್ನೇ ಕೊಂದು ಹಾಕಿದೆ!!ಅದೇಗೆ ಎಂಬ ಪ್ರಶ್ನೆ ಮೂಡಿರಬೇಕಲ್ವಾ?? ಹೇಗೆ ಗೊತ್ತೇ..

ಹೌದು. ಇಲ್ಲಿ ಹಾಡು ಜೋರಾಗಿ ಹಾಕಿದ್ದ ಎಂಬ ವಿಷಯಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮುಂಬೈ ನಗರದ ಮಾಲ್ವಾನಿಯ ಅಂಬುಜ್ ಎಂಬ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಈ ಪ್ರದೇಶದಲ್ಲಿ ಅಕ್ಕ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ಇಬ್ಬರು ವ್ಯಕ್ತಿಗಳು, ಹಾಡಿನ ಧ್ವನಿ ಹೆಚ್ಚಾಗಿದ್ದಕ್ಕೆ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಜೋರಾಗಿ ಹಾಡು ಹಾಕಿದ್ದಕ್ಕೆ ಧ್ವನಿ ಕಡಿಮೆ ಮಾಡುವಂತೆ ಪಕ್ಕದ ಮನೆಯಾತ ಕೇಳಿಕೊಂಡಿದ್ದಾನೆ. ಇದಕ್ಕೆ ವ್ಯಕ್ತಿ ಒಪ್ಪಿಲ್ಲ. ಅಲ್ಲದೇ,ಕಡಿಮೆ ಮಾಡಲು ಆಗುವುದಿಲ್ಲ ಎಂದು ಹೇಳಿದ್ದಾನೆ. ಈ ವಿಷಯವಾಗಿಯೇ ಇಬ್ಬರ ನಡುವೆ ಗಲಾಟೆ ಶುರುವಾಗಿದೆ.ಆಗ ಧ್ವನಿ ಕಡಿಮೆ ಮಾಡುವಂತೆ ಹೇಳಿದ್ದ ಸೈಫ್ ಅಲಿ ಚಂದ್ ಅಲಿ ಶೇಖ್ ಎಂಬಾತ, ಹೆಚ್ಚು ಧ್ವನಿ ಇಟ್ಟು ಹಾಡು ಹಾಕಿದ್ದ 40 ವರ್ಷದ ಸುರೇಂದ್ರಕುಮಾರ್ ಗುನ್ನಾರ್ ಅವರನ್ನು ಥಳಿಸಿದ್ದಾನೆ.

ಗಲಾಟೆಯಲ್ಲಿ ಜೋರಾಗಿ ಪೆಟ್ಟು ತಿಂದಿದ್ದ ಸುರೇಂದ್ರಕುಮಾರ್ ಗೆ ಅತೀವ ರಕ್ತಸ್ರಾವ ಉಂಟಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲು ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ, ದಾರಿ ಮಧ್ಯೆ ಆತ ಸಾವನ್ನಪ್ಪಿದ್ದಾನೆ
ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಪ್ರಕರಣ
ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಅಂತೂ ಸಂಗೀತ ಇವನನ್ನು ಕೊಂದೇ ಬಿಡ್ತು!!