ಹೆಲಿಕಾಫ್ಟರ್ ದುರಂತದಲ್ಲಿ ವೀರ ಮರಣ ಹೊಂದಿದ ಹುತಾತ್ಮ ಬ್ರಿಗೇಡಿಯರ್ ಲಿದ್ದರ್ ಹಾಗೂ ಸಿಡಿಎಸ್ ರಾವತ್ ದಂಪತಿಗಳ ಅಂತ್ಯಕ್ರಿಯೆ ಇಂದು

ಹೆಲಿಕಾಫ್ಟರ್ ದುರಂತದಲ್ಲಿ ವೀರ ಮರಣ ಹೊಂದಿದ ಹುತಾತ್ಮ ಬ್ರಿಗೇಡಿಯರ್ ಲಿದ್ದರ್ ಹಾಗೂ ಸಿಡಿಎಸ್ ರಾವತ್ ದಂಪತಿಗಳ ಅಂತ್ಯಕ್ರಿಯೆ ಇಂದು.

ಡಿಸೆಂಬರ್ ಎಂಟರಂದು ಕೂನೂರು ಬಳಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ 13 ಜನ ಮರಣ ಹೊಂದಿದ್ದಾರೆ. ಅವರಲ್ಲಿ ಒಬ್ಬರಾದ ಹುತಾತ್ಮ ಬ್ರಿಗೇಡಿಯರ್ ಲಿದ್ದರ್ ಅವರ ಅಂತ್ಯಕ್ರಿಯೆ ಇಂದು ದೆಹಲಿಯಲ್ಲಿ ನಡೆದಿದೆ. ದೆಹಲಿಯ ಕಂಟೋನ್ಮೆಂಟ್ ಚಿತಾಗಾರದಲ್ಲಿ ಸಕಲ ಸೇನಾ ಗೌರವದೊಂದಿಗೆ ಅವರ ಅಂತ್ಯಕ್ರಿಯೆ ನಡೆದಿದೆ. ಬ್ರಿಗೇಡಿಯರ್ ಲಿದ್ದರ್, ಬಿಪಿನ್ ರಾವತ್ ಗೆ ಸೇನಾ ಸಲಹೆಗಾರರಾಗಿದ್ದರು.

ರಾವತ್ ದಂಪತಿಗಳ ಪಾರ್ಥಿವ ಶರೀರವನ್ನು ದೆಹಲಿಯ ಕಾಮರಾಜ್ ರಸ್ತೆಯಲ್ಲಿರುವ ರಾವತ್ ನಿವಾಸಕ್ಕೆ ರವಾನೆ ಮಾಡಲಾಗಿದೆ. ಮಧ್ಯಾಹ್ನ 12 :30ರ ವರೆಗೆ ಸಾರ್ವಜನಿಕರಿಗೆ ಹಾಗೂ ಗಣ್ಯರಿಗೆ ಪಾರ್ಥಿವ ಶರೀರದ ಅಂತಿಮದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಗೃಹ ಸಚಿವರಾದ ಅಮಿತ್ ಶಾ ,ರಾವತ್ ನಿವಾಸಕ್ಕೆ ಬಂದು ಅಂತಿಮ ನಮನ ಸಲ್ಲಿಸಿದ್ದಾರೆ. ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಸಿಎಂ ಯೋಗಿ ಆದಿತ್ಯನಾಥ್ ಅಂತಿಮ ನಮನ ಸಲ್ಲಿಸಲಿದ್ದಾರೆ. ನಂತರ ಪಾರ್ಥಿವ ಶರೀರದ ಮೆರವಣಿಗೆ ಮಾಡಿ ಸಕಲ ಸರ್ಕಾರಿ ಹಾಗೂ ಸೇನಾ ಗೌರವದೊಂದಿಗೆ ರಾವತ್ ದಂಪತಿಗಳಅಂತ್ಯಕ್ರಿಯೆ ನಡೆಯಲಿದೆ. ಸಂಜೆ ಸುಮಾರು ನಾಲ್ಕು ಗಂಟೆಯ ವೇಳೆಗೆ ದೆಹಲಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಚೀಫ್ ಆಫ್ ಡಿಫೆನ್ಸ್ ಆಗಿದ್ದ ರಾವತ್ ರವರು ಹೆಲಿಕಾಪ್ಟರು ದುರಂತದಲ್ಲಿ ಮರಣ ಹೊಂದಿದ್ದು ದೇಶಕ್ಕೆ, ಭರಿಸಲಾಗದ ನಷ್ಟವಾಗಿದೆ.

Leave A Reply

Your email address will not be published.