Home latest ಶರಣ್ ಪಂಪ್‌ವೆಲ್ ಅವರ ವ್ಯಾಟ್ಸಾಪ್ ಸಂದೇಶದ ರೀತಿಯಲ್ಲಿ ಎಡಿಟ್ ಮಾಡಿ ಸಂದೇಶ ರವಾನೆ | ಅಪಪ್ರಚಾರಕ್ಕೆ...

ಶರಣ್ ಪಂಪ್‌ವೆಲ್ ಅವರ ವ್ಯಾಟ್ಸಾಪ್ ಸಂದೇಶದ ರೀತಿಯಲ್ಲಿ ಎಡಿಟ್ ಮಾಡಿ ಸಂದೇಶ ರವಾನೆ | ಅಪಪ್ರಚಾರಕ್ಕೆ ವಿ.ಹಿಂ.ಪ,ಬಜರಂಗದಳ ಖಂಡನೆ

Hindu neighbor gifts plot of land

Hindu neighbour gifts land to Muslim journalist

ಸಾಮಾಜಿಕ ಜಾಲತಾಣದಲ್ಲಿ ಶರಣ್ ಪಂಪ್ ವೆಲ್ ಹೆಸರಿನಲ್ಲಿ ಸಂದೇಶವೊಂದು ರವಾನೆಯಾಗಿದ್ದು, ಸದ್ಯ ಹಿಂದೂ ಕಾರ್ಯಕರ್ತರಲ್ಲಿ ಗೊಂದಲ ಹಾಗೂ ಅನುಮಾನಕ್ಕೆ ಕಾರಣವಾಗಿತ್ತು.

ಆ ಸಂದೇಶಗಳು ಯಾವುವು? ಸ್ವತಃ ಪಂಪ್ ವೆಲ್ ಅವರೇ ರವಾನಿಸಿದ್ದಾರಾ? ಸದಾ ಹಿಂದೂ ಕಾರ್ಯಕರ್ತರ ಕಾಳಜಿ ವಹಿಸುವ ಬಲಿಷ್ಠ ನಾಯಕನ ಮನಸ್ಥಿತಿ ಇದೇನಾ ಎಂದು ಕೆಲವರು ಪ್ರಶ್ನಿಸಿದ್ದರೆ ಕೆಲವರು ಇದು ಅಪಪ್ರಚಾರದ ಇನ್ನೊಂದು ಮುಖ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಶರಣ್ ಪಂಪ್ ವೆಲ್ ಹೆಸರಿನಲ್ಲಿ ಸಂದೇಶ!! ಹಿಂದೂ ಕಾರ್ಯಕರ್ತರ ಹೆಣ ಬೀಳಬೇಕು- ಆಗ ಬೀದಿಗಿಳಿಯಲು ಸುಲಭ!!

ಮೊನ್ನೆಯ ದಿನ ಉಪ್ಪಿನಂಗಡಿಯಲ್ಲಿ ನಡೆದ ತಲವಾರು ದಾಳಿ ವಿಚಾರದಲ್ಲಿ ಕಾರ್ಯಕರ್ತರೆಂದು ವಾಟ್ಸಪ್ ನಲ್ಲಿ ಮೆಸೇಜ್ ಮಾಡಿದ್ದ ವ್ಯಕ್ತಿಯೋರ್ವರಿಗೆ,ಉತ್ತರವೊಂದು ಬಂದಿದ್ದು, ಅದರಲ್ಲಿ “ನಮಗೆ ನಮ್ಮವರ ಹೆಣ ಬೀಳ್ಬೇಕು, ಆಗ ಮಾತ್ರ ನಾವು ಬೀದಿಗೆ ಇಳಿಯಲು ಸಾಧ್ಯ, ಮೊನ್ನೆಯ ದಾಳಿಯಲ್ಲಿ ಆತ ಸತ್ತಿಲ್ಲ. ಎಲೆಕ್ಷನ್ ಹತ್ತಿರ ಬರುತ್ತಿರುವಾಗ ಇದೆಲ್ಲಾ ಬೇಕು, ಅದಕ್ಕಾಗಿಯೇ ನಾವೂ ಸಣ್ಣಪುಟ್ಟ ಹಲ್ಲೆಗಳನ್ನು ನಡೆಸುತ್ತಿದ್ದೇವೆ” ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದೂ, ಶರಣ್ ಪಂಪ್ ವೆಲ್ ಅವರೇ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಬಿಂಬಿಸಲಾಗಿತ್ತು.

ಈ ಕುರಿತು ಸಂದೇಶ ರವಾನಿಸಿರುವ ವಿಶ್ವ ಹಿಂದೂ ಪರಿಷತ್ ಕೈಯಲ್ಲಿ ಏನೂ ಮಾಡಲಾಗದ ಕೊನೆಯ ಅಸ್ತ್ರವೇ ಅಪಪ್ರಚಾರ ಎಂದಿದೆ.