Home News ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಲೆ.ಕರ್ನಲ್ ಹರ್ಜಿಂದರ್ ಸಿಂಗ್ ಕಾರ್ಕಳದ ಅಳಿಯ!

ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಲೆ.ಕರ್ನಲ್ ಹರ್ಜಿಂದರ್ ಸಿಂಗ್ ಕಾರ್ಕಳದ ಅಳಿಯ!

Hindu neighbor gifts plot of land

Hindu neighbour gifts land to Muslim journalist

ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಲೆ.ಕರ್ನಲ್ ಹರ್ಜಿಂದರ್ ಸಿಂಗ್ ಕಾರ್ಕಳದ ಅಳಿಯ!

ಸೇನಾ ಹೆಲಿಕಾಪ್ಟರ್ ದುರಂತಕ್ಕೆ ದೇಶಕ್ಕೆ ದೇಶವೇ ಮರುಗುತ್ತಿದೆ. ಈ ದುರ್ಘಟನೆಯಲ್ಲಿ ಉಡುಪಿ ಜಿಲ್ಲೆಯ ಅಳಿಯ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ ಹುತಾತ್ಮರಾಗಿದ್ದು, ಈಗ ಕಾರ್ಕಳದಲ್ಲಿ ನೀರವ ಮೌನ ಆವರಿಸಿದೆ.

ಹರ್ಜಿಂದರ್ ,ಬಿಪಿನ್ ರಾವತ್ ಅವರ ಆಪ್ತ ಕಾರ್ಯದರ್ಶಿಯಾಗಿದ್ದರು. ಹರ್ಜಿಂದರ್ ಸಿಂಗ್‍ಗೆ ಕರ್ನಾಟಕಕ್ಕೆ ಅವಿನಾಭವ ಸಂಬಂಧವಿತ್ತು. ಹರ್ಜಿಂದರ್ ಸಿಂಗ್ ಸುಮಾರು 10 ವರ್ಷಗಳ ಹಿಂದೆ ಸೇನೆಯಲ್ಲಿರುವ ಕಾರ್ಕಳದ ಪ್ರಫುಲ್ಲ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಆಗಾಗ ಕಾರ್ಕಳಕ್ಕೆ ಬರುತ್ತಿದ್ದ ಕರ್ನಲ್ ದಂಪತಿಯನ್ನು ನೆನೆದು ಕಾರ್ಕಳ ಸಾಲ್ಮರದ ಮಿನೇಜಸ್ ಕುಟುಂಬ ಕಣ್ಣೀರಿಡುತ್ತಿದೆ.

ಪ್ರಪುಲ್ಲಾ ಅವರು ಮೊದಲು ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲಿ ಹರ್ಜಿಂದರ್ ಸಿಂಗ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಇತ್ತೀಚೆಗೆ ಸ್ವಯಂ ನಿವೃತ್ತಿಯನ್ನು ಪಡೆದು ಸೇನಾ ಶಾಲೆಯಲ್ಲೇ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ನಾಲ್ಕು ವರ್ಷದ ಹಿಂದೆ ಪ್ರಪುಲ್ಲಾ ದಂಪತಿ ಕಾರ್ಕಳಕ್ಕೆ ಬಂದಿದ್ದರು. ತುಂಬಾ ಕಾಲ ಇಲ್ಲಿಯೇ ಇದ್ದರು. ತಂದೆ-ತಾಯಿ ಅಕ್ಕಂದಿರ ಜೊತೆ ಚೆನ್ನಾಗಿ ಸಮಯ ಕಳೆದಿದ್ದರು.

ಹರ್ಜಿಂದರ್ ಸಿಂಗ್ ಮೃದು ವ್ಯಕ್ತಿ ಆಗಿದ್ದರು. ಎಲ್ಲರೊಂದಿಗೂ ಚೆನ್ನಾಗಿ ಬೆರೆಯುತ್ತಿದ್ದರು. ಉತ್ತರ ಭಾರತ, ದಕ್ಷಿಣ ಭಾರತದ ಜೊತೆ ಒಡನಾಟವಿತ್ತು. ಕುಟುಂಬಸ್ಥರಿಗೆ ಹರ್ಜಿಂದರ್ ಸಿಂಗ್ ಇನ್ನಿಲ್ಲ ಎಂಬ ಸುದ್ದಿ ನಿನ್ನೆ ಮಧ್ಯಾಹ್ನದ ನಂತರ ಮಾಧ್ಯಮ ಹಾಗೂ ಸೇನೆಯಿಂದ ತಿಳಿದು ಬಂದಿದ್ದು, ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.

ಹರ್ಜಿಂದರ್ ಸಿಂಗ್ ಅವರ ಪಾರ್ಥಿವ ಶರೀರವನ್ನು ರಾತ್ರಿ 8 ಗಂಟೆ ಸುಮಾರಿಗೆ ದೆಹಲಿಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಅಂತಿಮ ಸಂಸ್ಕಾರಕ್ಕೆ ಕುಟುಂಬ ಅಲ್ಲಿಗೆ ಹೋಗಲಿದೆ. ನಾಳೆ 11 ಗಂಟೆಗೆ ಅಂತಿಮ ನಮನಕ್ಕೆ ವ್ಯವಸ್ಥೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.