Home Food ಮದುವೆಗಾಗಿ ಸಿದ್ದವಾಗಿತ್ತು ವೆಡ್ಡಿಂಗ್ ಕೇಕ್ | ಆದರೆ ಕೇಕ್ ಮಂಟಪಕ್ಕೆ ಬರುತ್ತಿದ್ದಂತೆಯೇ ನವ ದಂಪತಿಗೆ ಕಾದಿತ್ತು...

ಮದುವೆಗಾಗಿ ಸಿದ್ದವಾಗಿತ್ತು ವೆಡ್ಡಿಂಗ್ ಕೇಕ್ | ಆದರೆ ಕೇಕ್ ಮಂಟಪಕ್ಕೆ ಬರುತ್ತಿದ್ದಂತೆಯೇ ನವ ದಂಪತಿಗೆ ಕಾದಿತ್ತು ಶಾಕ್!! ಅಷ್ಟಕ್ಕೂ ಅಲ್ಲಿ ನಡೆದಿದ್ದು??

Hindu neighbor gifts plot of land

Hindu neighbour gifts land to Muslim journalist

ಮದುವೆಗಳನ್ನು ಈಗ ಎಲ್ಲರೂ ಭರ್ಜರಿಯಾಗಿ, ಅದ್ದೂರಿಯಾಗಿ ಆಚರಿಸುತ್ತಾರೆ. ಅದರಲ್ಲೂ ವಿದೇಶಗಳಲ್ಲಿ ಮದುವೆ ಎಂದರೆ ವಿಶೇಷವಾಗಿ ಆಚರಣೆ ಮಾಡುತ್ತಾರೆ. ಅಲ್ಲಿ ಕೆಲವು ವಿಚಿತ್ರ ಪದ್ಧತಿಗಳಿರುತ್ತದೆ. ಅದರಲ್ಲೂ ಪಾರ್ಟಿಗೆ ಹೆಚ್ಚು ಒತ್ತುಕೊಡುವ ಅಲ್ಲಿನ ಜನ ಕೇಕ್ ಕತ್ತರಿಸಿಯೇ ಮದುವೆಯನ್ನು ಪೂರ್ಣಗೊಳಿಸುತ್ತಾರೆ. ಇತ್ತೀಚೆಗೆ ಭಾರತದಲ್ಲೂ ಮದುವೆ ಸಮಾರಂಭಗಳಲ್ಲಿ, ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸುವ ಪದ್ಧತಿ ರೂಢಿಯಾಗಿದೆ. ಹಾಗೆಯೇ ಇಲ್ಲಿನ ಮದುವೆ ಸಮಾರಂಭದಲ್ಲಿ ನವಜೋಡಿ ಕೇಕ್​ನಿಂದಾಗಿ ಒಂದು ಕ್ಷಣ ಭಯಭೀತರಾಗಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಲ್ಲಿ ಮದುವೆಯ ಸಮಾರಂಭ ಆಯೋಜಿಸಲಾಗಿತ್ತು. ಎಲ್ಲರ ಕಣ್ಣು ಕೋರೈಸುವಂತೆ ಸಿದ್ಧಗೊಂಡ ಜೋಡಿಯೊಂದು ಇನ್ನೇನು ಮದುವೆಯ ವಿಧಿ ವಿಧಾನ ಪೂರೈಸಿ ಮದುವೆಗಾಗಿ ತಂದ ಕೇಕ್‌ ಕತ್ತರಿಸಲು ಕಾಯುತ್ತಿದ್ದರು. ಆದರೆ ಅಷ್ಟರಲ್ಲಿ ಕೇಕ್‌ ತಂದ ಹೊಟೇಲ್‌ ಸಿಬ್ಬಂದಿಯೊಬ್ಬ ಅದನ್ನು ಕೆಳಗೆ ಬೀಳಿಸಿಯೇ ಬಿಟ್ಟಿದ್ದಾನೆ. ವಧು ವರರು ಸೇರಿದಂತೆ ಎಲ್ಲರೂ ಇದನ್ನು ಗಾಬರಿಯಿಂದ ನೋಡಿದ್ದಾರೆ. ಆದರೆ ಅಲ್ಲಿ ಬೇರೆಯದೇ ಟ್ವಿಸ್ಟ್‌ ಇತ್ತು. ಹೋಟೆಲ್‌ ಸಿಬ್ಬಂದಿ ವರ ಹಾಗೂ ವಧುವಿಗೆ ಫನ್‌ ಮಾಡುವ ಸಲುವಾಗಿ ಹೀಗೆ ಮಾಡಿದ್ದಾರೆ. ವಾಸ್ತವವಾಗಿ ಹೊಟೇಲ್‌ ಸಿಬ್ಬಂದಿ ಮದುವೆಗೆ ತಂದ ಕೇಕ್‌ ಅನ್ನು ಬೀಳಿಸಿಯೇ ಇರಲಿಲ್ಲ.

ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಯಾವುದೇ ಶುಭ ಕಾರ್ಯಗಳಿಗೂ ಕೇಕ್ ಕಟ್ ಮಾಡುತ್ತಾರೆ. ಇನ್ನು ಮದುವೆಯ ಸಂದರ್ಭದಲ್ಲಿ ಕೇಕ್ ಅವಿಭಾಜ್ಯ ಅಂಗವಾಗಿರುತ್ತೆ. ಈ ಸಂದರ್ಭದಲ್ಲಿ ಸಪ್ಲೇಯರ್ ಕೊಟ್ಟ ಶಾಕ್ ಮಾತ್ರ ಎಲ್ಲರನ್ನೂ ಒಂದು ಕ್ಷಣ ದಂಗಾಗಿಸಿತ್ತು.

ಪ್ರಸ್ತುತ ಹೋಟೆಲ್ ಸಪ್ಲೈಯರ್ ಮದುವೆಯ ಕೇಕ್ ಬೀಳಿಸಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವೀಡಿಯೋವನ್ನು ಇನ್‍ಸ್ಟಾಗ್ರಾಮ್ ನ ಶಿ_ಸೈಡಿಎಸ್ ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, 20 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ನೆಟ್ಟಿಗರು ಈ ವೀಡಿಯೋವನ್ನು ಇಷ್ಟ ಪಡುತ್ತಿದ್ದಾರೆ.

ವೀಡಿಯೋದಲ್ಲಿ ಏನಿದೆ?

https://www.instagram.com/reel/CWwE8BpBuCD/?utm_source=ig_web_copy_link

ವಧು ಮತ್ತು ವರರು ತಮ್ಮ ವೆಡ್ಡಿಂಗ್ ನಲ್ಲಿ ಸ್ಟೆಪ್ ಬೈ ಸ್ಟೆಪ್ ಕೇಕ್ ಅನ್ನು ಸಪ್ಲೈಯರ್ ತರುತ್ತಿರುವುದನ್ನು ನೋಡುತ್ತಿದ್ದು, ಕೇಕ್ ಕೈ ಜಾರಿ ಉರುಳಿ ನೆಲದ ಮೇಲೆ ಬೀಳುತ್ತದೆ. ಈ ದೃಶ್ಯ ನೋಡಿದ ಆ ದಂಪತಿ ಫುಲ್ ಶಾಕ್ ನಲ್ಲಿ ನಿಂತುಕೊಳ್ಳುತ್ತಾರೆ. ಆದರೆ ಸಪ್ಲೈಯರ್ ಅವರಿಬ್ಬರಿಗೆ ತಮಾಷೆ ಮಾಡುತ್ತಿದ್ದು, ಕೆಲವು ನಿಮಿಷಗಳಲ್ಲಿ ಇನ್ನೊಂದು ಕಡೆಯಿಂದ ಮತ್ತೊಬ್ಬ ಸಪ್ಲೈಯರ್ ನಿಜವಾದ ಕೇಕ್ ನೊಂದಿಗೆ ಬರುತ್ತಾನೆ.

ಸಪ್ಲೈಯರ್ ಕೊಟ್ಟ ಟ್ವಿಸ್ಟ್ ನೋಡಿ ದಂಪತಿ ನೆಮ್ಮದಿಯ ನಿಟ್ಟುಸಿರು ಬಿಟ್ಟು, ಕೇಕ್ ಕಟ್ ಮಾಡಿ ಸಂಭ್ರಮಿಸಿದರು. ವೀಡಿಯೋ ಶೇರ್ ಮಾಡಿದ ಅವರು, ದೇವರಿಗೆ ಧನ್ಯವಾದಗಳು. ಇದು ತಮಾಷೆಯಾಗಿತ್ತು. ನಮಗೆ ಈ ದೃಶ್ಯ ನೋಡಿ ಕಣ್ಣೀರು ಬಂದಿತ್ತು ಎಂದು ಬರೆದು ಪೋಸ್ಟ್ ಮಾಡಿದ್ದರು.