ಪಿಕಪ್ ವಾಹನ ಹಾಗೂ ಬೈಕ್ ನಡುವೆ ಅಪಘಾತ |ಬೈಕ್ ಸವಾರನಿಗೆ ಗಾಯ

Share the Article

ಸುಳ್ಯ: ಪಿಕಪ್ ವಾಹನವೊಂದು ಬೈಕ್ ಗೆ ಢಿಕ್ಕಿ ಹೊಡೆದ ಘಟನೆ ಅರಂತೋಡು ಕೊಡಂಕೇರಿ ತಿರುವಿನಲ್ಲಿ ನಡೆದಿದೆ.

ಸುಳ್ಯದಿಂದ ಅರಂತೋಡು ಕಡೆಗೆ ಬರುತ್ತಿದ್ದ ಪಿಕಪ್ ವಾಹನಕ್ಕೆ,ಮಡಿಕೇರಿಯಿಂದ ಬದಿಯಡ್ಕ ತೆರಳುತ್ತಿದ್ದ ಬೈಕ್ ನಡುವೆ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಾಯಗೊಂಡಿದ್ದಾನೆ.ಗಾಯಾಳುವನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಘಟನಾ ಸ್ಥಳಕ್ಕೆ ಕಲ್ಲುಗುಂಡಿ ಹೊರಠಾಣಾ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

Leave A Reply