ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಐರಾವತ ,ವಿದ್ಯುತ್ ಕಂಬಗಳು ಧರಶಾಹಿ

Share the Article

ಸುಳ್ಯ : ಮಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಐರಾವತ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಅರಂತೋಡು ಕಾಮದೇನು ಹೋಟೆಲ್ ಬಳಿಯ ತಿರುವಿನಲ್ಲಿ ಸಂಭವಿಸಿದೆ.

ಮಂಗಳವಾರ ತಡರಾತ್ರಿ ಮಂಗಳೂರಿನಿಂದ ಮೈಸೂರಿಗೆ ಹೋರಾಟ ಬಸ್ ಅರಂತೋಡು ಬಳಿ ತಿರುವಿನಲ್ಲಿ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕೆ ಸರಿದ ಪರಿಣಾಮ ಮರಕ್ಕೆ ಡಿಕ್ಕಿ ಹೊಡೆದಿದೆ ಇದೆ ವೇಳೆ ಅಲ್ಲಿದ್ದ ವಿದ್ಯುತ್ ಕಂಬವೊಂದು ತುಂಡಾಗಿ ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ ಎನ್ನಲಾಗಿದೆ.

ಬಸ್ಸಿನಲ್ಲಿ ಕೆಲವಷ್ಟೇ ಮಂದಿ ಪ್ರಯಾಣಿಕರಿದ್ದಾರೆಂದು ಹೇಳಲಾಗಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ ಎನ್ನಲಾಗಿದೆ.

Leave A Reply