Home News ಅನುಮಾನದ ಪೀಡೆಗೆ ಅಂತ್ಯವಾಯಿತು ದಂಪತಿಗಳ ಬಾಳು!!ಅನ್ಯಾಯವಾಗಿ ಪತ್ನಿಯನ್ನು ಬೆಂಕಿ ಹಚ್ಚಿ ಕೊಂದಿದ್ದ ಪತಿಯೊಬ್ಬನ ದುರಂತ ಅಂತ್ಯ!!

ಅನುಮಾನದ ಪೀಡೆಗೆ ಅಂತ್ಯವಾಯಿತು ದಂಪತಿಗಳ ಬಾಳು!!ಅನ್ಯಾಯವಾಗಿ ಪತ್ನಿಯನ್ನು ಬೆಂಕಿ ಹಚ್ಚಿ ಕೊಂದಿದ್ದ ಪತಿಯೊಬ್ಬನ ದುರಂತ ಅಂತ್ಯ!!

Hindu neighbor gifts plot of land

Hindu neighbour gifts land to Muslim journalist

ಪತ್ನಿಯ ಶೀಲ ಶಂಕಿಸಿದ ಪತಿಯೊಬ್ಬ ಆಕೆಯ ಮೇಲೆ ಪೆಟ್ರೋಲ್ ಸುರಿದು ಹತ್ಯೆ ನಡೆಸಿದ್ದು, ಮಾಡಿದ ಪಾಪ ಬಿಟ್ಟುಹೋಗುವುದಿಲ್ಲ ಎಂಬ ಮಾತಿನಂತೆ ಆತನೂ ಕೂಡಾ ಪರವೂರಿನಲ್ಲಿ ಬೀದಿ ಹೆಣವಾದ ಘಟನೆಯೊಂದು ಬೆಳಕಿಗೆ ಬಂದಿದೆ.

ಘಟನೆ ವಿವರ:ನಿಸಾರ್ ಎನ್ನುವ ವ್ಯಕ್ತಿಯೊರ್ವ ಪದೇ ಪದೇ ತನ್ನ ಪತ್ನಿಯ ಶೀಲ ಶಂಕಿಸಿ ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದ. ಮಸೀದಿಯ ಚಂದಾವಸೂಲಿ ಕೆಲಸ ಮಾಡುತ್ತಿದ್ದ ನಿಸಾರ್ ಕೆಲ ದಿನಗಳ ಹಿಂದೆ ಪತ್ನಿಯನ್ನು ಕೊಲ್ಲಲೆಂದೇ ಪೆಟ್ರೋಲ್ ತರಿಸಿಕೊಂಡಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆಯನ್ನು ಗಮನಿಸಿ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾಗಿದ್ದ.

ಈತನಿಂದ ತಪ್ಪಿಸಿಕೊಳ್ಳಲು ಆಕೆ ಮನೆಯ ಬಾಗಿಲು ಹಾಕಿದರೂ ಕಿಟಕಿಯಿಂದ ಬೆಂಕಿ ಕಡ್ಡಿಯೊಂದನ್ನು ಹಚ್ಚಿ ಆಕೆಯ ಮೇಲೆ ಎಸೆದ ಪರಿಣಾಮ ಆಕೆ ಸಂಪೂರ್ಣ ಸುಟ್ಟುಹೋಗಿದ್ದಳು. ಘಟನೆಯ ಬಳಿಕ ಆರೋಪಿತ ಪತಿ ತಲೆಮರೆಸಿಕೊಂಡು ಆಂಧ್ರದತ್ತ ಪರಾರಿಯಾಗಿದ್ದು, ಆತನಿಗೆ ಆಕೆಯ ಶಾಪ ತಟ್ಟಿಯೇ ಬಿಟ್ಟಿದೆ.

ಪತ್ನಿಗೆ ಬೆಂಕಿ ಹಚ್ಚುವಾಗ ತನ್ನ ಕೈ ಸುತ್ತುಕೊಂಡಿದ್ದ ನಿಸಾರ್ ಗಾಯವನ್ನು ಅಷ್ಟೇನೂ ಗಮನಕ್ಕೆ ತೆಗೆದುಕೊಂಡಿರಲಿಲ್ಲ. ಮುಂದಕ್ಕೆ ಗಾಯ ಉಲ್ಬಣಿಸಿ ಆತನ ಜೀವಕ್ಕೆ ಕುತ್ತು ತಂದಿದ್ದು, ಹೃದಯಾಘಾತದಿಂದಾಗಿ ಪೆನುಕೊಂಡದ ಮಸೀದಿಯೊಂದರ ಬಳಿಯಲ್ಲಿ ಬೀದಿ ಬದಿಯ ಹೆಣವಾಗಿ ಹೋಗಿದ್ದಾನೆ ಹಾಗೂ ಅಲ್ಲೇ ಆತನ ಅಂತ್ಯ ಸಂಸ್ಕಾರವು ನಡೆದಿದೆ ಎಂದು ವರದಿಯಾಗಿದೆ.