ಆರು ಜನ ಸುಂದರ ಮಹಿಳಾ ಸಂಸದರೊಂದಿಗೆ ಶಶಿ ತರೂರ್ ಸೆಲ್ಫಿ | ”ಕೆಲಸ ಮಾಡಲು ಲೋಕಸಭೆ ಆಕರ್ಷಕ ಸ್ಥಳವಲ್ಲ ಎಂದು ಯಾರು ಹೇಳುತ್ತಾರೆ’?” ಎಂಬ ಟ್ವೀಟ್ ಗೆ ಸೆಕ್ಸಿಸಂ ಎಂಬ ಆರೋಪ !
ನವದೆಹಲಿ: ಹಿರಿಯ ಕಾಂಗ್ರೆಸ್ ಮುಖಂಡ, ರಸಿಕ ಮಹಾಶಯ ಶಶಿ ತರೂರ್ ಸೋಮವಾರ ಮಾಡಿರುವ ಟ್ವೀಟ್ ವೊಂದು ವಿವಾದಕ್ಕೆ ಕಾರಣವಾಗಿದೆ. ”ಕೆಲಸ ಮಾಡಲು ಲೋಕಸಭೆ ಆಕರ್ಷಕ ಸ್ಥಳವಲ್ಲ ಎಂದು ಯಾರು ಹೇಳುತ್ತಾರೆ”? ಎಂಬ ಶೀರ್ಷಿಕೆಯಲ್ಲಿ ಆರು ಸುಂದರ ಮೊಗದ ಮಹಿಳಾ ಸಂಸದರ ಜೊತೆಗಿನ ಸೆಲ್ಫಿ ಫೋಸ್ಟ್ ಇದಾಗಿದ್ದು, ಅನೇಕ ನೆಟ್ಟಿಗರು ಸೆಕ್ಸಿಸಂ ಎಂದು ಆರೋಪಿಸಿದ್ದಾರೆ.
ಅಲ್ಲಿ ಮಹಿಳಾ ಸಂಸದರಾದ ಸುಪ್ರಿಯಾ ಸುಳೆ, ಮಿಮಿ ಚಕ್ರವರ್ತಿ,ಪ್ರೀನೀತ್ ಕೌರ್, ತಮಿಳಚಿ ತಂಗಪಾಂಡಿಯನ್, ನುಸ್ರತ್ ಜಹಾನ್ ರೂಹಿ ಮತ್ತು ಜ್ಯೋತಿಮಣಿ ಅವರೊಂದಿಗಿನ ಸೆಲ್ಫಿ ಫೋಟೋವೊಂದನ್ನು ಇಂದು ಬೆಳಗ್ಗೆ ಶಶಿ ತರೂರ್ ಟ್ವೀಟ್ ಮಾಡಿದ್ದರು. ಇದು ವಿವಾದಕ್ಕೆ ಕಾರಣವಾಗಿ ಅನೇಕ ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದರು.
ನಂತರ, ಕೆಲವು ಜನರ ಮನನೊಂದಿರುವುದಕ್ಕಾಗಿ ತರೂರ್ ಕ್ಷಮೆಯಾಚಿಸಿದ್ದಾರೆ ಮತ್ತು ಒಳ್ಳೆಯ ಹಾಸ್ಯದ ರೀತಿಯಲ್ಲಿ ಮಹಿಳಾ ಸಂಸದರೊಂದಿಗೆ ಸೆಲ್ಫಿ ಮಾಡಲಾಗಿದೆ. ಇದನ್ನು ಟ್ವೀಟ್ ಮಾಡುವಂತೆ ಅವರೇ ಕೇಳಿದ್ದಾಗಿ ಶಶಿ ತರೂರ್ ಹೇಳಿದ್ದಾರೆ.
https://twitter.com/ShashiTharoor/status/1465201613274955781/photo/1?ref_src=twsrc%5Etfw%7Ctwcamp%5Etweetembed%7Ctwterm%5E1465201613274955781%7Ctwgr%5E%7Ctwcon%5Es1_&ref_url=https%3A%2F%2Fwww.kannadaprabha.com%2Fnation%2F2021%2Fnov%2F29%2Ftharoors-selfie-with-six-women-mps-with-attractive-place-to-work-tweet-sparks-row-459210.html
ನೀವು ಮಹಿಳೆಯರನ್ನು ಆಕರ್ಷಣೆಯ ವಸ್ತುವನ್ನಾಗಿ ಮಾಡುವ ಮೂಲಕ ಸಂಸತ್ತು ಮತ್ತು ರಾಜಕೀಯದಲ್ಲಿ ಅವರ ಕೊಡುಗೆಯನ್ನು ಅವಮಾನಿಸುತ್ತಿದ್ದೀರಿ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದ್ದರು. ಸಂಸತ್ತಿನಲ್ಲಿ ಮಹಿಳೆಯರನ್ನು ಅವಮಾನಿಸುವುದನ್ನು ನಿಲ್ಲಿಸಿ ಎಂದು ಸುಪ್ರೀಂ ಕೋರ್ಟ್ ವಕೀಲರಾದ ಕರುಣಾ ನಂದಿ ಟ್ವೀಟ್ ಮಾಡಿದ್ದಾರೆ.
ಹೀಗೆ ಟ್ವೀಟರ್ ನಲ್ಲಿ ಟೀಕೆಗಳು ತೀವ್ರವಾಗುತ್ತಿದ್ದಂತೆ, ಇದನ್ನು ಒಳ್ಳೆಯ ರೀತಿಯಲ್ಲಿ ಮಾಡಲಾಗಿದ್ದು, ಕೆಲವು ಜನರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಆದರೆ ಈ ಕಾರ್ಯಸ್ಥಳದ ಸೌಹಾರ್ದತೆಯ ಪ್ರದರ್ಶನದಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ನನಗೆ ಸಂತೋಷವಾಯಿತು ಎಂದು ತಿರುವನಂತಪುರದಲ್ಲಿ ಶಶಿ ತರೂರ್ ಅವರು ಹೇಳಿಕೆ ನೀಡಿದ್ದಾರೆ.