Home latest ಲಾಕ್‌ಡೌನ್ ಕುರಿತು ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ ,ಸುಳ್ಳು ಸುದ್ದಿ ಹಬ್ಬಿಸಿದರೆ ಕ್ರಮ- ಡಾ.ಸುಧಾಕರ್

ಲಾಕ್‌ಡೌನ್ ಕುರಿತು ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ ,ಸುಳ್ಳು ಸುದ್ದಿ ಹಬ್ಬಿಸಿದರೆ ಕ್ರಮ- ಡಾ.ಸುಧಾಕರ್

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು : ಲಾಕ್ ಡೌನ್ ಬಗ್ಗೆ ಯಾವುದೇ ಪ್ರಸ್ತಾಪ ಸದ್ಯ ಸರಕಾರದ ಮುಂದಿಲ್ಲ. ಯಾರೂ ಈ ಬಗ್ಗೆ ಯಾವುದೇ ಗಾಬರಿಪಡುವುದು ಬೇಡ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಕೋವಿಡ್ ರೂಪಾಂತರಿತ ಹೊಸ ತಳಿ ಒಮಿಕ್ರಾನ್ ವಿಚಾರವನ್ನು ಮುಂದಿಟ್ಟು ಲಾಕ್ ಡೌನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಗೊಂದಲಮಯ, ತಪ್ಪು ಸುದ್ದಿ ಹರಡುತ್ತಿರುವುದು ಕಂಡುಬರುತ್ತಿದೆ. ಈ ರೀತಿ ಜನಸಾಮಾನ್ಯರನ್ನು ಆತಂಕಕ್ಕೀಡು ಮಾಡಬೇಡಿ ಎಂದವರು ಹೇಳಿದ್ದಾರೆ.

ಕೋವಿಡ್ 1 ಮತ್ತು 2 ಅಲೆಯಿಂದ ಈಗಾಗಲೇ ಜನಸಾಮಾನ್ಯರು ಬಹಳ ಕಷ್ಟನಷ್ಟ ಅನುಭವಿಸಿದ್ದಾರೆ. ಹಲವು ಜೀವಹಾನಿ ಉಂಟಾಗಿದೆ. ಆದ್ದರಿಂದ ಜನರಲ್ಲಿ ಮತ್ತೆ ಗೊಂದಲ ಮೂಡಿಸಬೇಡಿ ಎಂದು ಸಚಿವರು ಮನವಿ ಮಾಡಿದ್ದಾರೆ.