Home latest ವಿವಾದತ್ಮಕ ಹಾಸ್ಯ ಕಲಾವಿದ ಬೆಂಗಳೂರಿಗೆ ನೋ ಎಂಟ್ರಿ!! ಹಿಂದೂ ದೇವರ ಬಗ್ಗೆ ಅವಹೇಳನಕಾರಿಯಾಗಿ ಹಾಸ್ಯ ಮಾಡುವ...

ವಿವಾದತ್ಮಕ ಹಾಸ್ಯ ಕಲಾವಿದ ಬೆಂಗಳೂರಿಗೆ ನೋ ಎಂಟ್ರಿ!! ಹಿಂದೂ ದೇವರ ಬಗ್ಗೆ ಅವಹೇಳನಕಾರಿಯಾಗಿ ಹಾಸ್ಯ ಮಾಡುವ ಫರೂಕಿ ಆಗಮನಕ್ಕೆ ಸಂಘಟಕರಿಂದಲೇ ಪೊಲೀಸರ ಮೇಲೆ ಒತ್ತಡ!!?

Hindu neighbor gifts plot of land

Hindu neighbour gifts land to Muslim journalist

‘ದ್ವೇಷ ಗೆದ್ದಿದೆ ಕಲಾವಿದ ಸೋತ’ ಎಂದು ವಿವಾದಾತ್ಮಕ ಸ್ಟಾಂಡ್ ಅಪ್ ಕಾಮಿಡಿಯನ್ ಎಂದೇ ಕರೆಯಲ್ಪಡುವ ಮುನಾವರ್ ಫರೂಕಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ತಮ್ಮ ಹಾಸ್ಯ ಕಾರ್ಯಕ್ರಮದುದ್ದಕ್ಕೂ ಹಿಂದೂ ದೇವರುಗಳನ್ನು ಅವಹೇಳನ ಮಾಡುವ ಹಾಸ್ಯಕಲಾವಿದನಿಗೆ ಸದ್ಯ ಎಲ್ಲಿಯೂ ನೆಲೆ ಇಲ್ಲದಂತಾಗಿದೆ.

ತನ್ನ ಹಾಸ್ಯವು ಹಿಂದಿನಂತೆ ಇರುತ್ತಿದ್ದರೆ ಮೊನ್ನೆ ಭಾನುವಾರದ ದಿನ ಫರೂಕಿ ಬೆಂಗಳೂರಿನಲ್ಲಿ ನಡೆಯಲಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದ. ಆದರೆ ಆತನ ದುರಾದೃಷ್ಟ, ಈ ಮೊದಲೇ ಅವಹೇಳನವಾಗಿ ಹಾಸ್ಯ ಮಾಡಿದ್ದುದರಿಂದ ಎಲ್ಲಾ ಕಡೆಗಳಲ್ಲೂ ಆತನನ್ನು ಬಹಿಷ್ಕಾರ ಮಾಡುತ್ತಿದ್ದಾರೆ.ಅದರಂತೆ ಬೆಂಗಳೂರಿನ ಕಾರ್ಯಕ್ರಮಕ್ಕೂ ಆತನಿಗೆ ನೋ ಎಂಟ್ರಿ ಎಂದು ಪೊಲೀಸರು ನೋಟೀಸ್ ನೀಡಿದ್ದಾರೆ.

ಮುನಾವರ್ ವಿರುದ್ಧ ಹಲವಾರು ಪ್ರಕರಣಗಳಿದ್ದು, ಅದಲ್ಲದೇ ಈ ಮೊದಲೊಮ್ಮೆ ಒಂದು ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿದ ವ್ಯಕ್ತಿ. ಒಂದು ನಿರ್ದಿಷ್ಟ ಧರ್ಮದ ವಿರುದ್ಧ ಮಾಡುವ ಹಾಸ್ಯದಿಂದಾಗಿ ಎಲ್ಲಾ ರಾಜ್ಯಗಳು ಕೂಡಾ ಆತನ ಪ್ರೋಗ್ರಾಮ್ ನ್ನು ನಿಷೇಧಸಿದೆ. ಇದೆಲ್ಲವನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ಪೊಲೀಸರು ಆತನಿಗೆ ಬೆಂಗಳೂರು ಪ್ರವೇಶಕ್ಕೆ ಅನುಮತಿ ನಿರಾಕರಿಸಿ ಆದೇಶಿಸಿದ್ದಾರೆ.

ಪೊಲೀಸರ ಸಮಯಪ್ರಜ್ಞೆಯಿಂದಾಗಿ ರಾಜ್ಯದಲ್ಲಿ ಹಿಂದೂ ಧರ್ಮ ದಂಗೆ ಏಳುವುದು ತಪ್ಪಿದಂತಾಗಿದೆ.ಆತನ ಪ್ರೋಗ್ರಾಮ್ ಗೆ ಅವಕಾಶ ಕೊಡದೆ ಸಂಘಟಕರ ಮೇಲೆ ಪೊಲೀಸರು ಒತ್ತಡ ಹೇರಿದ್ದಾರೆ. ಆತನ ರಕ್ಷಣೆಗೆ ಕೋರಿದ್ದ ಅರ್ಜಿಯನ್ನು ಕೂಡಾ ರದ್ದುಗೊಳಿಸಲಾಗಿದೆ.