ವೇಣೂರು : ಮೊಬೈಲ್ ಅಂಗಡಿ ಕಳ್ಳತನ,ಆರೋಪಿಯ ಬಂಧನ

Share the Article

ವೇಣೂರು : ನಾರಾವಿಯ ಪಾರಿಜಾತ ಕಾಂಪ್ಲೆಕ್ಸ್‌ನಲ್ಲಿದ್ದ ಶ್ರೀನಿಧಿ ಮೊಬೈಲ್‌ ಸೆಂಟರ್‌ನಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಬಾಲಕನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ರಿಮಾಂಡ್ ಹೋಮ್ ಗೆ ಕಳುಹಿಸಿದ್ದಾರೆ.

ಅಂಗಡಿ ಮಾಲಕ ಕಾರ್ಕಳ ತಾಲೂಕಿನ ಈದು ಗ್ರಾಮದ ಹರಿಪ್ರಸಾದ್ ಶೆಟ್ಟಿ ಅವರು ನ. 22ರ ಬೆಳಗ್ಗೆ ಅಂಗಡಿಗೆ ಬಂದಾಗ ಶಟರ್‌ಗೆ ಹಾಕಿದ್ದ ಬೀಗ ಒಡೆದಿರುವುದು ಗೊತ್ತಾಗಿದೆ. ಒಳಗೆ ಹೋಗಿ ನೋಡಿದಾಗ ಸೊತ್ತುಗಳು ಚೆಲ್ಲಾಪಿಲ್ಲಿಯಾಗಿ ಸಿಸಿಟಿವಿಒಡೆದಿರುವುದು ಕಂಡುಬಂದಿದೆ. ಹೊಸ ಮೊಬೈಲ್‌ಗಳು ಹಾಗೂ ರಿಪೇರಿಗೆ ಬಂದಿದ್ದ ಒಟ್ಟು 34,000 ರೂ. ಮೌಲ್ಯದ ಮೊಬೈಲ್ ಕಳವಾಗಿದೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply