

ಡಿಜೆ ಶಬ್ದಕ್ಕೆ ಕೋಳಿಗಳು ಸತ್ತು ಹೋದಘಟನೆ ಭುವನೇಶ್ವರದಲ್ಲಿ ನಡೆದಿದೆ.ತಮಾಷೆಗಾಗಿ ಡಿಜೆ ಶಬ್ದಕ್ಕೆ ಕೋಳಿಗಳು ಕುಣಿದು ಕುಣಿದು ಸತ್ತವಾ ಎಂದು ಕೇಳಿಬರುತ್ತಿದೆಯಾದರೂ..ಈ ವಿಷಯ ಸ್ವಲ್ಪ ಗಂಭೀರವಾಗಿ ಯೋಚಿಸಬೇಕಾಗಿದೆ.
ಡಿಜೆ ಶಬ್ದಗಳಿಂದ ಹೃದಯದ ತೊಂದರೆ ಇರುವವರಿಗೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.ಕೋಳಿ ಸತ್ತಿರುವ ವಿಚಾರ ಈಗ ಠಾಣೆಯ ಮೆಟ್ಟಿಲೇರಿದೆ.
ಮದುವೆಯ ಮೆರವಣಿಗೆಯಲ್ಲಿ ಕೇಳಿದ ಡಿಜೆ ಶಬ್ದದಿಂದಾಗಿ 63 ಕೋಳಿಗಳು ಮೃತಪಟ್ಟ ಘಟನೆ ಭುವನೇಶ್ವರದಲ್ಲಿ ನಡೆದಿದೆ.
ಈ ಹಿನ್ನೆಲೆಯಲ್ಲಿ ಮದುವೆ ಮನೆಯವರ ಮೇಲೆ ಪ್ರಕರಣ ದಾಖಲಾಗಿದೆ.
ರವಿವಾರ ಮಧ್ಯರಾತ್ರಿಯ ಸ್ವಲ್ಪ ಮೊದಲು ಪೂರ್ವ ರಾಜ್ಯ ಒಡಿಶಾದಲ್ಲಿರುವ ತನ್ನ ಕೋಳಿ ಫಾರ್ಮ್ ಬಳಿ ಮದುವೆ ಮೆರವಣಿಗೆ ಹಾದುಹೋದಾಗ “ಕಿವಿ ಸೀಳುವ ಶಬ್ದ ಕೇಳಿ ಬಂದಿತ್ತು. ಸಂಗೀತವು ತುಂಬಾ ಗದ್ದಲದಿಂದ ಕೂಡಿದ್ದು ಕೋಳಿಗಳನ್ನು ಭಯಭೀತಗೊಳಿಸುತ್ತಿದ್ದರಿಂದ ಧ್ವನಿಯನ್ನು ಕಡಿಮೆ ಮಾಡಲು ನಾನು ಬ್ಯಾಂಡ್ ನಿರ್ವಾಹಕರನ್ನು ಕೇಳಿದ್ದೆ. ಆದರೆ ಅವರು ನನ್ನ ಮಾತು ಕೇಳದೆ.ಮದುಮಗನ ಸ್ನೇಹಿತರು ನನ್ನನ್ನು ಗದರಿಸಿದರು” ಎಂದು ರಂಜಿತ್ ಕುಮಾರ್ ಪರಿದಾ ತಿಳಿಸಿದರು.
ಕೋಳಿಗಳು ಹೃದಯಾಘಾತದಿಂದ ಸಾವನ್ನಪ್ಪಿವೆ ಎಂದು ಪಶುವೈದ್ಯ ರಂಜಿತ್ ಕುಮಾರ್ ಗೆ ತಿಳಿಸಿದರು. ಮದುವೆಯ ಮನೆಯವರು ಪರಿಹಾರವನ್ನು ನೀಡಲು ನಿರಾಕರಿಸಿದ ನಂತರ ಅವರು ಪೊಲೀಸ್ ದೂರು ದಾಖಲಿಸಿದರು.












