ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಗದು ಸಹಾಯಕಿ ನಗುಮುಖದ ಸ್ನೇಹಜೀವಿಯಾಗಿದ್ದ ಹೇಮಶ್ರೀ ನಿಧನ

Share the Article

ಬೆಳ್ತಂಗಡಿ:ತಾಲೂಕಿನ ಇಂದಬೆಟ್ಟು ನಿವಾಸಿ ನಿನ್ನೆ ಅನಾರೋಗ್ಯದಿಂದ ಮೃತಪಟ್ಟಿರೋದಾಗಿ ತಿಳಿದು ಬಂದಿದೆ.

ಪೇರಲ್ಲಪಲ್ಕೆ ಹರೀಶ್ ರವರ ಪತ್ನಿ ಹೇಮಶ್ರೀ ಎಂಬುವವರು ಮೃತಪಟ್ಟವರಾಗಿದ್ದಾರೆ.ಮೃತರು ಶ್ರೀ. ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ನಗದು ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.ಯಾವಾಗಲೂ ನಗು ಮೊಗದೊಂದಿಗೆ ಇತರರನ್ನು ಖುಷಿ ಪಡಿಸುತಿದ್ದ ಇವರು ಇದೀಗ ಇಹಲೋಕ ತ್ಯಜಿಸಿದ್ದಾರೆ.

ಮೃತರು ಪತಿ, ಒರ್ವ ಹೆಣ್ಣು ಮಗು, ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.ಇವರೊಂದಿಗೆ ಕೆಲಸದಲ್ಲಿ ಜೊತೆಯಾಗಿದ್ದ ಸ್ನೇಹಿತರು ಕಳೆದು ಹೋದ ದಿನಗಳನ್ನು ನೆನಪಿಸುತ್ತಾ, ಮಂಜುನಾಥ ಸ್ವಾಮಿ ಮೃತರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಕಣ್ಣೀರು ಹರಿಸಿದ್ದಾರೆ.

Leave A Reply