11 ತಿಂಗಳ ತರಬೇತಿ ಮುಗಿಸಿ ಸೇನೆಗೆ ಸೇರಿದ ಮೇಜರ್ ದಿ. ದೀಪಕ್ ನೈನಾವಾಲ್ ಪತ್ನಿ ಜ್ಯೋತಿ

Share the Article

ಚೆನ್ನೈ: 2018ರಲ್ಲಿ ಜಮ್ಮು ಕಾಶ್ಮೀರದ ಕುಲ್ಗಾಮ್‌ನಲ್ಲಿ ಉಗ್ರರೊಂದಿಗೆ ಹೋರಾಡಿ ಹುತಾತ್ಮರಾಗಿದ್ದ ಮೇಜರ್‌ ದೀಪಕ್‌ ನೈನಾವಾಲ್‌ ಅವರ ಪತ್ನಿ ಜ್ಯೋತಿ ನೈನಾವಾಲ್‌ ಅವರು ಕಳೆದ ಶನಿವಾರ ಅಧಿಕೃತವಾಗಿ ಸೇನೆ ಸೇರುವ ಮೂಲಕ ತಾನು ಅಂದುಕೊಂಡದ್ದನ್ನು ಸಾಧಿಸಿದ್ದಾರೆ.

ಚೆನ್ನೈನ ಸೇನಾ ತರಬೇತಿ ಕೇಂದ್ರದಲ್ಲಿ 11 ತಿಂಗಳ ತರಬೇತಿ ಪೂರ್ಣ ಗೊಳಿಸಿದ 153 ಭಾರತೀಯ ಕೆಡೆಟ್‌ಗಳನ್ನು ಶನಿವಾರ ಅಧಿಕೃತವಾಗಿ ಸೇನೆಗೆ ಸೇರ್ಪಡಿಸಿ­ಕೊಳ್ಳಲಾಗಿದ್ದು, ಅದರಲ್ಲಿ ಜ್ಯೋತಿಯೂ ಸೇರಿದ್ದಾರೆ. ಜ್ಯೋತಿ ಅವರಿಗೆ ಲೆಫ್ಟಿನೆಂಟ್‌ ಕರ್ನಲ್‌ ಹುದ್ದೆಯನ್ನು ನೀಡಲಾಗಿದೆ.

ಜ್ಯೋತಿಯವರ ಸೇನಾ ಸೇರ್ಪಡೆ ಅವರ ಪುತ್ರಿ ಲಾವಣ್ಯಳಿಗೂ ಸ್ಫೂರ್ತಿ ನೀಡಿದ್ದು, ನನ್ನ ಅಮ್ಮ ಸೇನೆ ಸೇರುವುದಾಗಿ ಯಾವಾಗಲೂ ಹೇಳುತ್ತಿದ್ದಳು. ಇಂದು ಅವರ ಆಸೆ ಈಡೇರಿದೆ. ನಾನು ವೈದ್ಯೆಯಾಗುವ ಕನಸು ಕಂಡಿದ್ದೆ. ಆದರೆ ಅಪ್ಪ ಹುತಾತ್ಮರಾದ ಬಳಿಕ ಸೇನೆಯ ವೈದ್ಯೆಯೇ ಆಗಬೇಕೆಂದು ನಿರ್ಧರಿಸಿದ್ದೇನೆ ಎಂದು 11 ವರ್ಷದ ಲಾವಣ್ಯ ಖುಷಿಯಿಂದ ಹೇಳಿಕೊಂಡಿದ್ದಾರೆ.

Leave A Reply