ಬೇರಾವುದೇ ಕಲೆಗಾರರಿಗೆ ಕಮ್ಮಿ ಇಲ್ಲ ಎಂಬಂತೆ ಕೇಕ್ ನಲ್ಲಿ ಮಗುವಿನ ರೂಪ ತಯಾರಿಸಿದ ಸೆಲೆಬ್ರಿಟಿ ಬೇಕರ್ |ನೈಜ ಮಗು ಯಾವುದು ಕೇಕ್ ಯಾವುದೆಂದು ಅರಿಯಲಾಗದೆ ಈತನ ಕಲಾ ಕೌಶಲ್ಯಕ್ಕೆ ಬೆರಗಾದ ನೆಟ್ಟಿಗರು

Share the Article

ಅದೆಷ್ಟೋ ಜನರು ತಮ್ಮದೇ ಆದ ಪ್ರತಿಭೆಗಳಿಂದ ಹೆಸರುವಾಸಿಯಾಗಿದ್ದಾರೆ. ತಮ್ಮದೇ ಸ್ವಂತಿಕೆಯಿಂದ ವಿವಿಧ ಕಲೆಗಳನ್ನು ಹುಡುಕಿ ಜಗತ್ತಿಗೆ ಪರಿಚಯಿಸುತ್ತಾರೆ. ಇದೇ ರೀತಿ ವಿಶಿಷ್ಟವಾದ ಪ್ರತಿಭೆವುಳ್ಳ ವ್ಯಕ್ತಿಯ ಪರಿಚಯ ಇಲ್ಲಿದೆ ನೋಡಿ.

ಈತ ಸೆಲೆಬ್ರಿಟಿ ಬೇಕರ್‌ ಬೆನ್ ಕಲ್ಲೆನ್‌. ಯಾವಾಗಲೂ ನೈಜಾಕೃತಿಗಳಂತೆಯೇ ಕೇಕ್‌ಗಳನ್ನು ಮಾಡುವಲ್ಲಿ ನಿಪುಣನಾದ ಈತ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.ಬೇಕಿಂಗ್ ಕಲೆಗೆ ತಮ್ಮದೇ ಆದ ಕ್ರಿಯಾಶೀಲ ಟಚ್‌ ಕೊಟ್ಟಿರುವ ಕಲ್ಲೆನ್, ಹೈಪರ್‌-ರಿಯಲಿಸ್ಟಿಕ್ ಕೇಕ್‌ಗಳನ್ನು ತಯಾರಿಸುವ ಮೂಲಕ ತನ್ನ ಕೌಶಲ್ಯದ ಪರಿಯನ್ನು ಆಗಾಗ ಪರಿಚಯಿಸುತ್ತಲೇ ಇರುತ್ತಾರೆ.

ಕಲ್ಲೆನ್‌ ಅದ್ಯಾವ ಮಟ್ಟಿಗೆ ನೈಜ ವಸ್ತುಗಳ ರೂಪದಲ್ಲಿ ಕೇಕ್ ತಯಾರಿಸುತ್ತಾರೆ ಎಂದರೆ, ಒಂದು ವೇಳೆ ಅವರು ಮಗುವಿನ ಹಾಗೆ ಕಾಣುವ ಕೇಕ್ ಮಾಡಿದರೆ ಅದು ಮಗುವೆಂದೇ ನೋಡುಗರಿಗೆ ಅನಿಸುತ್ತದೆ. ಇಂಥದ್ದೇ ಕಾರಣದಿಂದ ಕಲ್ಲೆನ್ ನೆಟ್‌ನಲ್ಲಿ ನೆಟ್ಟಿಗರಿಗೆ ಗೊಂದಲ ಸೃಷ್ಟಿಸಿದ್ದಾರೆ.

ತಮ್ಮ ಕೈಗಳಲ್ಲಿ ಮಗುವನ್ನು ಎತ್ತಿಕೊಂಡಿರುವ ಕಲ್ಲೆನ್‌ರ ಚಿತ್ರವೊಂದು ವೈರಲ್ ಆಗಿದ್ದು,ಈ ಚಿತ್ರದಲ್ಲಿ ಕಲ್ಲೆನ್ ತಮ್ಮದೇ ಅಸಾಧಾರಣ ಪ್ರತಿಭೆಯ ಖುದ್ದು ಸಂತ್ರಸ್ತರಾಗಿದ್ದಾರೆ. ಬಹಳಷ್ಟು ಮಂದಿ ಅದು ನಿಜವಾದ ಮಗುವಲ್ಲ, ಮಗುವಿನ ಆಕೃತಿಯಲ್ಲಿರುವ ಕೇಕ್ ಎಂದೇ ನಂಬಿದ್ದಾರೆ.”ನನ್ನ ಜೀವನದಲ್ಲಿ ನೋಡಿದ ಅದ್ಭುತವಾದ ವಸ್ತು ಈಕೆ, ನಾನು ಜಗತ್ತಿನಲ್ಲೇ ಬಹಳ ಅದೃಷ್ಟಶಾಲಿ ವ್ಯಕ್ತಿ! 31/05/21ರಲ್ಲಿ ಜನಿಸಿದ ವಿಲ್ಲೋ 9.1 ಚಂಕ್ ತೂಕವಿದ್ದಳು!” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.ಅಂತೂ ಇವರ ಪ್ರತಿಭೆ ಇತರರಿಗೆ ಖುಷಿಕ್ಕಿಂತಲೂ ಗೊಂದಲಕ್ಕೆ ದೂಡಿದ್ದೇ ಹೆಚ್ಚು!

Leave A Reply

Your email address will not be published.