ವಿದೇಶದಲ್ಲಿ ಉದ್ಯೋಗ ನೀಡುವುದಾಗಿ ಸುಳ್ಯದ ಮಹಿಳೆಗೆ ಲಕ್ಷಾಂತರ ರೂ.ವಂಚನೆ : ದೂರು ದಾಖಲು

Share the Article

ಸುಳ್ಯ : ವಿದೇಶದಲ್ಲಿ ಉದ್ಯೋಗ ನೀಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ಹಣ ವಂಚಿಸಿರುವ ಬಗ್ಗೆ ಉಡುಪಿ ಸೈಬರ್ ಕ್ರೈಂ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಪೂರ್ಣಿಮಾ (34) ಎಂಬವರ ವಾಟ್ಸಾಪ್‌ಗೆ ತನ್ನ ಮಗನಿಗೆ ಬೈಪಾಸ್ ಸರ್ಜರಿ ಆಗಬೇಕಾಗಿರುವುರಿಂದ ಹಣ ಸಹಾಯ ಮಾಡಬೇಕಾಗಿ ಅಪರಿಚಿತರು ಸಂದೇಶ ಕಳುಹಿಸಿ, ಫೋನ್ ಪೇ ಮೂಲಕ 5,000ರೂ.ವನ್ನು ಪೂರ್ಣಿಮಾ ಖಾತೆ ಕಳುಹಿಸಿದ್ದರು. ಇದನ್ನು ನಂಬಿದ ಇವರು ತಾನು 5000ರೂ. ಹಣವನ್ನು ಸೇರಿಸಿ ಆತ ತಿಳಿಸಿರುವ ಖಾತೆಗೆ ಪೋನ್ ಪೇ ಮೂಲಕ ಒಟ್ಟು 10,000ರೂ. ಹಣವನ್ನು ಸೆ.18ರಂದು ಕಳುಹಿಸಿದ್ದರು.
ನಂತರ ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಅಪರಿಚಿತ ವ್ಯಕ್ತಿಗಳು ಪೂರ್ಣಿಮಾಗೆ ವಿದೇಶದಲ್ಲಿ ಉದ್ಯೋಗ ಹಾಗೂ ಗಿಫ್ಟ್ ನೀಡುವುದಾಗಿ ನಂಬಿಸಿ ಅವರಿಂದ ಒಟ್ಟು 4,31,500ರೂ. ಹಣವನ್ನು ಜಮೆ ಮಾಡಿಸಿಕೊಂಡು ಹಣವನ್ನು ವಾಪಾಸು ನೀಡದೆ ಕೆಲಸವನ್ನು ಕೊಡಿಸದೆ ಮೋಸ ಮಾಡಿದ್ದಾರೆ.

ಮಂಗಳೂರು : 8 ವರ್ಷದ ಬಾಲಕಿಯ ಅತ್ಯಾಚಾರಗೈದು ಕೊಲೆ

ಪೂರ್ಣಿಮಾಗೆ ಕರೆ ಮಾಡಿ ನಂಬಿಸಿ ಹಣ ಪಡೆದ ಆರೋಪಿಗಳ ವಿರುದ್ಧ ಮತ್ತು ಇವರ ಖಾತೆಗೆ ಹಣ ಹಾಕಿಸಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.

Leave A Reply