ಪುತ್ತೂರು : ಜಮೀನು ವಿಚಾರದಲ್ಲಿ ತಗಾದೆ | ನಾಡಕೋವಿಯಿಂದ ಮಹಿಳೆಯ ಮೇಲೆ ಗುಂಡು ಹಾರಾಟಕ್ಕೆ ಯತ್ನ ,ಪಾರು

Share the Article

ಪುತ್ತೂರು: ಜಮೀನಿನ ವಿಚಾರಕ್ಕೆ ಸಂಬಂಧಿಸಿ ಮಾತಿನಚಕಮಕಿ ನಡೆದು ವ್ಯಕ್ತಿಯೊಬ್ಬರು ನಾಡಕೋವಿಯಿಂದ ಶೂಟ್ ಮಾಡಿದಾಗ ಗುರಿ ತಪ್ಪಿದ ಮತ್ತು ಘಟನೆಯಿಂದ ಮಹಿಳೆಯೊಬ್ಬರು ಪಾರಾದ ಘಟನೆ ಶಾಂತಿಗೋಡು ಗ್ರಾಮದ ವೀರಮಂಗಲದಲ್ಲಿ ನ.21ರಂದು ನಡೆದಿದೆ.

ಕೊಯಕುಡೆ ಎಂಬಲ್ಲಿ ತನ್ನ ಮನೆಯ ಬಳಿ ಧರ್ಣಮ್ಮ ಅವರು ತನ್ನ ಪತಿ ಬಾಬು ಗೌಡ ಹಾಗೂ ಮಗ ರವಿ.ಕೆ.ರವರೊಂದಿಗೆ ತಮ್ಮ ಸ್ವಾಧೀನ ಇರುವ ಜಮೀನಿನಲ್ಲಿ ತೊಂಡೆಕಾಯಿ ಬಳ್ಳಿಗೆ ಚಪ್ಪರವನ್ನು ನಿರ್ಮಿಸುತ್ತಿರುವಾಗ ದೇವಪ್ಪ ಗೌಡ ಎಂಬುವವರು ಧರ್ಣಮ್ಮ ಎಂಬವರಿಗೆ ನಾಡ ಕೋವಿಯಿಂದ ಗುರಿ ಇಟ್ಟಿದ್ದರು.

ಮಂಗಳೂರು : 8 ವರ್ಷದ ಬಾಲಕಿಯ ಅತ್ಯಾಚಾರಗೈದು ಕೊಲೆ

ಕೋವಿಯಿಂದ ಮದ್ದು ಗುಂಡು ಹಾರಿದಾಗ ಗುರಿ ತಪ್ಪಿದ ಹಿನ್ನಲೆಯಲ್ಲಿ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ.

Leave A Reply