ನನ್ನ ಸಾವಿಗೆ ಕಾರಣ ಯಾರೆಂದು ಬರೆಯಲು ಭಯವಾಗ್ತಿದೆ | ನಮ್ಮ ಜಿಲ್ಲೆಯಲ್ಲಿ ಲೈಂಗಿಕ ಕಿರುಕುಳದಿಂದ ಸಾಯುವ ಕೊನೆಯ ಹುಡುಗಿ ನಾನೇ ಆಗಿರಬೇಕು

Share the Article

ನನ್ನ ಸಾವಿಗೆ ಕಾರಣ ಯಾರೆಂದು ಬರೆಯಲು ಭಯವಾಗ್ತಿದೆ, ನಮ್ಮ ಜಿಲ್ಲೆಯಲ್ಲಿ ಲೈಂಗಿಕ ಕಿರುಕುಳದಿಂದ ಸಾಯುವ ಕೊನೆಯ ಹುಡುಗಿ ನಾನೇ ಆಗಿರಬೇಕು ಎಂದು ಡೆತ್ ನೋಟ್ ಬರೆದಿಟ್ಟು 17 ವರ್ಷ ಪ್ರಾಯದ ಬಾಲಕಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ತಮಿಳುನಾಡು ರಾಜ್ಯದ ಕರೂರಿನಲ್ಲಿ ನಡೆದಿದೆ. ಶುಕ್ರವಾರ ಸಂಜೆ ಈ ಘಟನೆ ನಡೆದಿದೆ.

12ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಶುಕ್ರವಾರ ಸಂಜೆ ಮನೆಗೆ ಬಂದ ಬಳಿಕ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬಾಲಕಿಯ ತಾಯಿ ಈ ಸಮಯದಲ್ಲಿ ಮನೆಯಲ್ಲಿ ಇರಲಿಲ್ಲ. ಪಕ್ಕದ ಮನೆಯ ಮಹಿಳೆಯೊಬ್ಬರು ಘಟನೆಯನ್ನು ನೋಡಿ ತಾಯಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

ಆತ್ಮಹತ್ಯೆಗೂ ಮೊದಲು ಬಾಲಕಿಯು ಡೆತ್ ನೋಟ್ ಬರೆದಿದ್ದಾಳೆ. “ಕರೂರ್ ಜಿಲ್ಲೆಯಲ್ಲಿ ಲೈಂಗಿಕ ಕಿರುಕುಳದಿಂದ ಸಾಯುವ ಕೊನೆಯ ಹುಡುಗಿ ನಾನೇ ಆಗಿರಬೇಕು. ನನ್ನ ಈ ನಿರ್ಧಾರಕ್ಕೆ ಕಾರಣ ಯಾರು ಎಂದು ಹೇಳಲು ನನಗೆ ಭಯವಾಗಿದೆ. ನಾನು ಈ ಭೂಮಿಯಲ್ಲಿ ದೀರ್ಘಕಾಲ ಬದುಕಬೇಕು ಮತ್ತು ಇತರರಿಗೆ ಸಹಾಯ ಮಾಡಬೇಕೆಂದು ಬಯಸಿದ್ದೆ, ಆದರೆ ಈಗ ನಾನು ಇಷ್ಟು ಬೇಗ ಇಹಲೋಕ ತ್ಯಜಿಸುವಂತಾಗಿದೆ” ಎಂದು ಬಾಲಕಿ ಬರೆದಿದ್ದಾಳೆ.

Leave A Reply