Whatsapp: ಭಾರತದಲ್ಲಿ ಬರೋಬ್ಬರಿ 9.7 ಮಿಲಿಯನ್ ವಾಟ್ಸ್ಆ್ಯಪ್ ಖಾತೆ ನಿಷೇಧ!


Whatsapp: ಭಾರತದಲ್ಲಿ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ನ ಹಲವು ಖಾತೆಗಳನ್ನು ನಿಷೇಧಿಸಲಾಗಿದೆ. IANS ವರದಿಯ ಪ್ರಕಾರ, ಫೆಬ್ರವರಿ 2025 ರಲ್ಲಿ ಭಾರತದ 9.7 ಮಿಲಿಯನ್ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ವಾಟ್ಸ್ಆ್ಯಪ್(Whatsapp)ಮಂಗಳವಾರ, ಏಪ್ರಿಲ್ 1, 2025 ರಂದು ತಿಳಿಸಿದೆ. ಈ ನಿರ್ಧಾರಕ್ಕೆ ಕಾರಣವನ್ನು ನೀಡಲಾಗಿದ್ದು, ಭಾರತದಲ್ಲಿ ವಾಟ್ಸ್ಆ್ಯಪ್ ಬಳಸುವ ನಿಯಮಗಳನ್ನು ಉಲ್ಲಂಘಿಸುತ್ತಿದ್ದ ಖಾತೆಗಳನ್ನು ಮುಚ್ಚಲಾಗಿದೆ ಎಂದು ಕಂಪನಿ ಹೇಳಿದೆ.

ಭಾರತದಲ್ಲಿ ವಾಟ್ಸ್ಆ್ಯಪ್ 500 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿದೆ. AI-ಚಾಲಿತ ಮಾಡರೇಶನ್ ಮತ್ತು ಸುಧಾರಿತ ವರದಿ ಮಾಡುವ ಸಾಧನಗಳಲ್ಲಿ ಹೂಡಿಕೆ ಮಾಡುವುದರಿಂದ ಭಾರತದಲ್ಲಿ ಈ 9.7 ಮಿಲಿಯನ್ ಖಾತೆಗಳನ್ನು ನಿಷೇಧಿಸಬಹುದು ಎಂದು ಕಂಪನಿ ಹೇಳಿದೆ.
99 ಲಕ್ಷ ವಾಟ್ಸ್ಆ್ಯಪ್ ಖಾತೆ ಬ್ಯಾನ್
ಈ ವರ್ಷದ ಜನವರಿಯಲ್ಲಿ 99 ಲಕ್ಷ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ವಾಟ್ಸ್ಆ್ಯಪ್ ಇತ್ತೀಚೆಗಷ್ಟೆ ತನ್ನ ಮಾಸಿಕ ವರದಿಯಲ್ಲಿ ತಿಳಿಸಿತ್ತು. ಹೆಚ್ಚುತ್ತಿರುವ ಹಗರಣಗಳು, ಸ್ಪ್ಯಾಮ್ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ನಿಲ್ಲಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ. ಜನವರಿ 1 ರಿಂದ ಜನವರಿ 30 ರವರೆಗೆ ಒಟ್ಟು 99 ಲಕ್ಷ 67 ಸಾವಿರ ಖಾತೆಗಳನ್ನು ನಿರ್ಬಂಧಿಸಲಾಗಿದೆ. ಇವುಗಳಲ್ಲಿ 13.27 ಲಕ್ಷ ಖಾತೆಗಳನ್ನು ಯಾವುದೇ ದೂರು ಸ್ವೀಕರಿಸುವ ಮೊದಲೇ ಬ್ಯಾನ್ ಮಾಡಲಾಗಿದೆ. ಜನವರಿಯಲ್ಲಿ, ವಾಟ್ಸ್ಆ್ಯಪ್ ತನ್ನ ಬಳಕೆದಾರರಿಂದ 9,474 ದೂರುಗಳನ್ನು ಸ್ವೀಕರಿಸಿದೆ. ಇವುಗಳಲ್ಲಿ 239 ಖಾತೆಗಳ ಮೇಲೆ ಕ್ರಮ ಕೈಗೊಂಡ ಕಂಪನಿಯು ಖಾತೆಗಳನ್ನು ನಿರ್ಬಂಧಿಸುವುದು ಸೇರಿದಂತೆ ಇತರ ಕ್ರಮಗಳನ್ನು ತೆಗೆದುಕೊಂಡಿದೆ.

Comments are closed.