ದೇವರ ಹಾಡು ಹಾಡಿದ ಗಾಯಕಿ ಮೇಲೆ ಶಾಲಾ ಸಹ ಮಾಲೀಕನಿಂದ ಹಲ್ಲೆಗೆ ಯತ್ನ?

ಕೋಲ್ಕತ್ತಾ: ಬಂಗಾಳಿ ಸಿನಿಮಾವೊಂದರ ಭಕ್ತಿ ಗೀತೆಯನ್ನು ಹಾಡಿದ್ದಕ್ಕೆ ಗಾಯಕಿ ಮೇಲೆ ಹಲ್ಲೆ ಯತ್ನ ಮಾಡಿದ ಆರೋಪದ ಮೇಲೆ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಪೂರ್ಬ ಮೇದಿನಿಪುರ್ನ ಭಾಗಬನ್ಪುರ್ ಎಂಬಲ್ಲಿನ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಖ್ಯಾತ ಬಂಗಾಳಿ ಗಾಯಕಿ ಲಗ್ನಜಿತಾ ಚಕ್ರಬರ್ತಿ ಎಂಬಾಕೆಯನ್ನು ನಿಂದನೆ ಮಾಡಿ ಹಲ್ಲೆಗೆ ಯತ್ನ ಮಾಡಿದ ಆರೋಪ ಹೊತ್ತು ಓರ್ವ ವ್ಯಕ್ತಿ ಆ ಶಾಲೆಯ ಸಹ ಮಾಲೀಕ ಎಂದು ವರದಿಯಾಗಿದೆ.
ಇಂದು ಸಂಜೆ ಶಾಲೆಯೊಂದರಲ್ಲಿ 7 ಗಂಟೆಗೆ ಲಗ್ನಿಜಿತಾ ಚಕ್ರಬರ್ತಿ ಅವರ ಕಾರ್ಯಕ್ರಮ ಪ್ರಾರಂಭವಾಗಿದೆ. ಮೊದಲು 45 ನಿಮಿಷ ಹಾಡಿದ್ದಾರೆ. ನಂತರ ಸನ್ಮಾನ, ಕಾರ್ಯಕ್ರಮ ನಡೆದಿದೆ. ಏಳನೇ ಹಾಡು ದೇಬಿ ಚೌಧುರಾಣಿ ಎನ್ನುವ ಬಂಗಾಳಿ ಸಿನಿಮಾದ ʼಜಾಗೋ ಮಾʼ ಹಾಡನ್ನು ಹಾಡಿದ್ದಾರೆ. ಇದು ಹಿಂದೂ ದೇವತೆಯನ್ನು ಸ್ತುತಿ ಮಾಡುವ ಹಾಡು. ಇದನ್ನು ಹಾಡಿದ ನಂತರ ಲಗ್ನಿಜಿತಾ ಅವರು ಸಭಿಕರ ಜೊತೆ ಮಾತನಾಡುತ್ತಿದ್ದರು. ಆ ಸಂದರ್ಭದಲ್ಲಿ ವೇದಿಕೆಗೆ ಏರಿದ ಮೆಹಬೂಬ್ ಮಲ್ಲಿಕ್ ಎನ್ನುವ ವ್ಯಕ್ತಿ ಲಗ್ನಿಜಿತಾ ಅವರನ್ನು ನಿಂದನೆ ಮಾಡಿ ಹೊಡೆಯಲು ಯತ್ನ ಮಾಡಿದ್ದಾನೆ.
ಈ ಘಟನೆ ನಂತರ ಲಗ್ನಜಿತಾ ಅವರು ಕಾರ್ಯಕ್ರಮ ನಿಲ್ಲಿಸಿ ಅಲ್ಲಿಂದಲೇ ಹೊರಟು ಹೋಗಿದ್ದಾರೆ. ನಂತರ ಪೊಲೀಸ್ ಠಾಣೆಗೆ ಹೋಗಿ ದೂರನ್ನು ನೀಡಿದ್ದಾರೆ. ಆ ಬಳಿಕ ಪೊಲೀಸರು ಮೆಹಬೂಬಾ ಮಲ್ಲಿಕ್ನನ್ನು ಬಂಧನ ಮಾಡಿದ್ದಾರೆ. ಮಲ್ಲಿಕ್ ಶಾಲೆಯ ಆಡಳಿತ ಮಂಡಳಿಯ ಸದಸ್ಯರೂ ಆಗಿದ್ದು, ಜೊತೆಗೆ ಶಾಲೆಯ ಸಹ ಮಾಲೀಕರಲ್ಲಿ ಒಬ್ಬರಾಗಿದ್ದಾರೆ.
Comments are closed.