Madenuru Manu: ತನ್ನನ್ನು ಬಿಡಿಸಿದ ಲಾಯರ್ ವಿರುದ್ಧವೇ ಕೇಸ್ ಹಾಕಿದ ಮಡೆನೂರು ಮನು!!


Madenuru Manu: ಕಾಮಿಡಿ ಕಿಲಾಡಿ ಖ್ಯಾತಿಯ ಮಡೆನೂರು ಮನು ಅತ್ಯಾಚಾರ ಆರೋಪದ ಮೇಲೆ ಜೈಲು ಪಾಲಾಗಿದ್ದರು. ಬಳಿಕ ಅವರನ್ನು ಇಬ್ಬರು ಲಾಯರ್ ಗಳು ಜೈಲಿನಿಂದ ಬಿಡಿಸಿದ್ದರು. ಇದೀಗ ಅದೇ ಲಾಯರ್ ಗಳ ಮೇಲೆ ಮಡೆನೂರು ಮನು ಅವರು ವಂಚನೆಯ ಆರೋಪ ಮಾಡಿ ಪ್ರಕರಣದ ದಾಖಲಿಸಿದ್ದಾರೆ.

ವಿಡಿಯೋ ಒಂದನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಮಡೆನೂರು ಮನು ಅವರು “ಇತ್ತೀಚೆಗೆ ಒಂದು ಪ್ರಕರಣ ಆಗಿತ್ತು. ಆಗ ಲಾಯರ್ ನವೀನ್ ಗಂಗಪ್ಪನಳ್ಳಿ ಹಾಗೂ ಶಾರದಾ ಪರಿಚಯ ಆಗಿದ್ದರು. ಇಬ್ಬರು ಕೂಡಾ ಆರಂಭದಲ್ಲಿ ನನ್ನನ್ನು ಜೈಲಿನಿಂದ ಬಿಡಿಸಲು 1,70,000 ರೂ. ಆಗುತ್ತೆ ಎಂದು ನನ್ನ ಹೆಂಡತಿ ಹಾಗೂ ನನ್ನ ಸ್ನೇಹಿತ ವಾಸು ಅವರ ಬಳಿ ಹೇಳಿದ್ದರು. ಆದರೆ ಅದಾದ ಮೇಲೆ ನನ್ನನ್ನು ಭೇಟಿ ಮಾಡಲು ಯಾವ ಲಾಯರ್ ಕೂಡಾ ಬಂದಿಲ್ಲ. ನನ್ನ ಹೆಂಡತಿಗೂ ನನ್ನನ್ನು ಭೇಟಿ ಮಾಡದಂತೆ ಹೆದರಿಸಿದ್ದರು. ಅವರು ನನ್ನನ್ನು ಭೇಟಿ ಮಾಡೋಕೆ ಹೋಗಬೇಡ, ಮತ್ತೆ ಪ್ರಾಬ್ಲಂ ಆಗುತ್ತೆ ಎಂದು ಹೇಳಿ ಹೆದರಿಸಿದ್ದರು. ಮಾತ್ರವಲ್ಲದೇ ಹಣ ವಸೂಲಿಗೆ ಅವಳ ಮಾಂಗಲ್ಯ ಚೈನ್, ವಡವೆಗಳನ್ನು ಕೂಡಾ ಅಡ ಇಡಿಸಿದರು. ನನ್ನ ಕುಟುಂಬದಲ್ಲಿ ಹಲವರ ಬಳಿಯಿಂದ ಹಣ ತೆಗೆದುಕೊಂಡು, ಸಾಲ ಮಾಡಿಸಿ ಒಟ್ಟು ಏಳೂವರೆ ಲಕ್ಷ ರೂ. ಹಣ ತೆಗೆದುಕೊಂಡಿದ್ದಾರೆ.
ನಾನು ಜೈಲಿಂದ ಹೊರಗೆ ಬಂದು ಅವರ ಬಳಿ ಇಷ್ಟೊಂದು ಹಣ ಯಾಕೆ ತೆಗೆದುಕೊಂಡಿದ್ದೀರಿ ಎಂದು ಕೇಳಿದಾಗ ಅವರು, ನಾವು ಮೊದಲಿಗೆ ಕೇಳಿದ್ದು 12 ಲಕ್ಷ ರೂ. ಎಂದು ಮಾತು ಬದಲಾಯಿಸಿದ್ದಾರೆ. ಅವರು ನನ್ನ ಹೆಂಡತಿಗೆ ಹೆದರಿಸಿ, ಸಿಂಪತಿ ಗಿಟ್ಟಿಸಿಕೊಂಡು ಇಷ್ಟೊಂದು ಹಣ ವಂಚಿಸಿದ್ದಾರೆ. ನಾನು ಹಣ ವಾಪಸ್ ಕೊಡಿ ಎಂದು ಕೇಳಿದಾಗ ನೀನೇ ನಮಗೆ ಐದು ಲಕ್ಷ ಕೊಡಬೇಕು, ಕೊಟ್ಟಿಲ್ಲ ಎಂದರೆ ಮತ್ತೆ ಜೈಲಿಗೆ ಹಾಕಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಈಗ ನಾನು ನನ್ನ ಹಣ ವಾಪಸ್ ಪಡೆಯಲು 3,000 ರೂ. ಕಟ್ಟಿ ಬಾರ್ ಕೌನ್ಸಿಲ್‌ಗೆ ಲೀಗಲ್ ಆಗಿ ಅರ್ಜಿ ಹಾಕಿದ್ದೇನೆ. ಅವರು ಹೇಳಿದ್ರು 15 ದಿನದಲ್ಲಿ ಎಲ್ಲರಿಗೂ ನೋಟಿಸ್ ಬರುತ್ತೆ ಎಂದು. ಆದರೆ ಇಲ್ಲಿಯವರೆಗೆ ಯಾವ ನೋಟಿಸ್ ಕೂಡಾ ಬಂದಿಲ್ಲ, ಯಾರನ್ನೂ ಕರೆದು ಮಾತನಾಡಿಸಿಯೂ ಇಲ್ಲ. ಈಗ ನನಗೆ ನ್ಯಾಯ ಕೊಡಿಸಿ ಎಂದು ದೂರು ಕೊಟ್ಟಿದ್ದೇನೆ” ಎಂದು ಹೇಳಿದ್ದಾರೆ

Comments are closed.