Vijayalakshmi : ದರ್ಶನ್ ಹೊರಗಡೆ ಇದ್ದಾಗ ಇದ್ದು ಇಲ್ಲದ ಹಾಗೆ ಇರ್ತಾರೆ, ಜೈಲಲ್ಲಿದ್ದಾಗ ಮಾತಾಡ್ತಾರೆ – ಕಿಚ್ಚ ಸುದೀಪ್ ಗೆ ನಟ ದರ್ಶನ್ ಪತ್ನಿ ಕೌಂಟರ್


Vijayalakshmi : ಹುಬ್ಬಳ್ಳಿಯಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ‘ಮಾರ್ಕ್’ ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮ ನಡೆದಿದ್ದು ಇದರಲ್ಲಿ ಕಿಚ್ಚ ಸುದೀಪ್ ಅವರು, ನಾವು ಮಾತಿಗೆ ಬದ್ಧ, ನೀವು ಯುದ್ಧಕ್ಕೆ ಸಿದ್ಧವೇ? ಎನ್ನುವುದರ ಮೂಲಕ ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದರು. ಇದೀಗ ಕಿಚ್ಚನ ಮಾತಿಗೆ ನಟ ದರ್ಶನ್ ಪತ್ನಿ ಖಡಕ್ ಕೌಂಟರ್ ಕೊಟ್ಟಿದ್ದಾರೆ.

ಹೌದು, ಕಿಚ್ಚನ ಯುದ್ಧದ ಮಾತಿಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇದೀಗ ಎಂಟ್ರಿ ಕೊಟ್ಟಿದ್ದು, ದರ್ಶನ್ ಜೈಲಲ್ಲಿ ಇದ್ದಾಗ ಇವರು ವೇದಿಕೆ ಮೇಲೆ ಫ್ಯಾನ್ಸ್ ಬಗ್ಗೆ ಮಾತನಾಡುತ್ತಾರೆ. ಆದರೆ ದರ್ಶನ್ ಅವರು ಹೊರಗಡೆ ಇದ್ದಾಗ ಈ ರೀತಿ ಹೇಳಿಕೆ ನೀಡುವವರು ಬೆಂಗಳೂರಿನಲ್ಲಿ ಇದ್ದಾರೋ ಇಲ್ವೋ ಅಂತ ಇರುತ್ತಾರೆ ಎಂದು ಟಾಂಗ್ ನೀಡಿದ್ದಾರೆ.
ಇಷ್ಟೂ ದಿನ ತಾಳ್ಮೆಯಿಂದ ಇದ್ವಿ,ಈಗ ಹೇಳುತ್ತಿದ್ದೇನೆ.. ತಡೆಯೋತನಕ ತಡಿ, ಮಾತಾಡೋ ಟೈಮ್ ನಲ್ಲಿ ಮಾತಾಡಿ ಎಂದು ನಟ ಕಿಚ್ಚ ಸುದೀಪ್ ಹುಬ್ಬಳ್ಳಿಯಲ್ಲಿ ಅಭಿಮಾನಿಗಳಿಗೆ ಹೇಳಿದ್ದರು. ಈ ಬಗ್ಗೆ ದಾವಣಗೆರೆಯಲ್ಲಿ ಮಾತನಾಡಿರುವ ವಿಜಯಲಕ್ಷ್ಮಿ, ದರ್ಶನ್ ಜೈಲಲ್ಲಿ ಇರುವ ವೇಳೆ ಕೆಲವರು ವೇದಿಕೆ ಮೇಲೆ ಫ್ಯಾನ್ಸ್ ಬಗ್ಗೆ ಮಾತನಾಡುತ್ತಾರೆ. ಆದರೆ ದರ್ಶನ್ ಹೊರಗಡೆ ಇದ್ದಾಗ ಇವರು ಬೆಂಗಳೂರಿನಲ್ಲಿ ಇದ್ದಾರೋ ಇಲ್ವೋ ಎಂಬಂತೆ ಇರುತ್ತಾರೆ. ನಟ ದರ್ಶನ್ ಬಗ್ಗೆ ಮಾತನಾಡುವವರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ, ಹಾಗೆಯೇ ದರ್ಶನ್ ಅಭಿಮಾನಿಗಳು ಕೂಡ ತಲೆ ಕೆಡಿಸಿಕೊಳ್ಳಬೇಡಿ ಎಂದು ವಿಜಯಲಕ್ಷ್ಮಿ ಟಾಂಗ್ ಕೊಟ್ಟಿದ್ದಾರೆ.
https://www.instagram.com/reel/DShz6jbiLfk/?igsh=YW93NmR1anAxOXZl

Comments are closed.