Jio: ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್- ಕಡಿಮೆ ಬೆಲೆಯ ಈ ಪ್ಲಾನ್ ರಿಚಾರ್ಜ್ ಮಾಡಿ, ವರ್ಷದ 365 ದಿನವೂ ವ್ಯಾಲಿಡಿಟಿ ಪಡೆಯಿರಿ 

Share the Article

Jio: ಜಿಯೋ ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ಕೊಟ್ಟಿದ್ದು ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಪರಿಚಯಿಸಿದ್ದು ಇದನ್ನು ರಿಚಾರ್ಜ್ ಮಾಡಿಕೊಂಡರೆ ವರ್ಷದ 365 ದಿನವೂ ಕೂಡ ವ್ಯಾಲಿಡಿಟಿಯನ್ನು ಪಡೆಯಬಹುದಾಗಿದೆ.

ಹೌದು, ಸ್ಮಾರ್ಟ್ ಫೋನ್ ಗಳಿಗೆ ಸಾಮಾನ್ಯವಾಗಿ 28 ದಿನ ಒಂದು ತಿಂಗಳು ಅಥವಾ 56 ದಿನ ಇಲ್ಲ ಮೂರು ತಿಂಗಳವರೆಗಿನ ರಿಚಾರ್ಜ್ ಪ್ಲಾನ್ ಗಳನ್ನು ಮಾಡಿಕೊಳ್ಳುತ್ತೇವೆ. ಇದು ಆಂಡ್ರಾಯ್ಡ್ ಫೋನ್ ಹೊಂದಿರುವವರಿಗೆ ಬೆಸ್ಟ್ ರಿಚಾರ್ಜ್ ಪ್ಲಾನ್ ಆಗಿವೆ. ಆದರೆ ಕೀಪ್ಯಾಡ್ ಮೊಬೈಲ್ ಹೊಂದಿರುವವರಿಗೆ ಅಥವಾ ಕರೆಗಳನ್ನು ಮಾತ್ರ ಮಾಡುವವರಿಗೆ ಹಾಗೂ ಮನೆಯಲ್ಲಿ ವೈಫೈ ಹೊಂದಿದ್ದು, ಬರೀ ಕರೆಗಳಿಗೆ ಮಾತ್ರ ರಿಚಾರ್ಜ್ ಮಾಡುವುದಾದರೆ ಯಾವುದು ಬೆಸ್ಟ್ ಪ್ಲಾನ್ ಎಂಬುದು ಹಲವರ ಪ್ರಶ್ನೆ. ಅದಕ್ಕೆ ಜೀಯೋ ಪರಿಚಯಿಸಿರುವ 1748 ಯೋಜನೆ ಸೂಕ್ತವಾಗಬಹುದು. 

ಯಾಕೆಂದ್ರೆ ಅನೇಕ ಜನರು ತಮ್ಮ ಪೋಷಕರಿಗೆ ಈ ಯೋಜನೆಯನ್ನು ಆಯ್ಕೆ ಮಾಡುತ್ತಿದ್ದಾರೆ. ಕಾರಣ ಅವರ ಮನೆಯಲ್ಲಿ ವೈ-ಫೈ ಇದೆ. ಏಕೆಂದರೆ ವೈ-ಫೈ ಅವರ ಡೇಟಾ ಅಗತ್ಯಗಳನ್ನು ಪೂರೈಸುತ್ತದೆ. ಆದಾಗ್ಯೂ, ಈ ಕೈಗೆಟುಕುವ ಯೋಜನೆಯು ಕರೆ ಮಾಡುವ ಸೌಲಭ್ಯಗಳನ್ನು ಹೊಂದಿದೆ. 

ಇನ್ನು ಈ ಯೋಜನೆಯು ಅನಿಯಮಿತ ಧ್ವನಿ ಕರೆ ಮತ್ತು 3600 SMS ಗಳನ್ನು ನೀಡುತ್ತದೆ. ಆದರೆ ಇದು ಡೇಟಾವನ್ನು ನೀಡುವುದಿಲ್ಲ. ಅಗತ್ಯವಿದ್ದರೆ ನೀವು ಪ್ರತ್ಯೇಕ ಡೇಟಾ ಪ್ಯಾಕ್ ಅನ್ನು ಖರೀದಿಸಬಹುದು. ಈ ರೂ.1748 ಯೋಜನೆಯೊಂದಿಗೆ, ನೀವು 336 ದಿನಗಳ ಮಾನ್ಯತೆಯನ್ನು ಪಡೆಯುತ್ತೀರಿ. ಈ ರಿಲಯನ್ಸ್ ಜಿಯೋ ರೀಚಾರ್ಜ್ ಯೋಜನೆಯು ಜಿಯೋ ಟಿವಿ ಮತ್ತು ಜಿಯೋ ಕ್ಲೌಡ್ಗೆ ಉಚಿತ ಪ್ರವೇಶದಂತಹ ಕೆಲವು ಹೆಚ್ಚುವರಿ ಪ್ರಯೋಜನಗಳನ್ನು ಸಹ ನೀಡುತ್ತದೆ.

Comments are closed.