Mumbai: ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿರುವ ಸ್ಟಾರ್ ಕ್ರಿಕೆಟಿಗನ ಪತ್ನಿ!!

Share the Article

Mumbai: ಮುಂಬೈನ ಪೆಟ್ರೋ ನಿಲ್ದಾಣ ಒಂದರಲ್ಲಿ ವೃದ್ಧ ಮಹಿಳೆ ಒಬ್ಬರು ಭಿಕ್ಷೆ ಬೇಡುತ್ತಿರುವುದನ್ನು ಕಂಡು ಮರುಗಿದ ಸ್ಥಳೀಯರು ಅವರನ್ನು ಆಶ್ರಯ ಮನೆಗೆ ಕರೆತಂದು ಸ್ನಾನ ಮಾಡಿಸಿ ಬಟ್ಟೆ ತೊಡಿಸಿದ್ದಾರೆ. ಬಳಿಕ ಅವರ ಹಿನ್ನೆಲೆಯನ್ನು ಕೇಳಿದಾಗ ಎಲ್ಲರೂ ದಂಗಾಗಿ ಹೋಗಿದ್ದಾರೆ. ಕಾರಣ ಆಕೆ ಒಬ್ಬ ಸ್ಟಾರ್ ಕ್ರಿಕೆಟ್ ಆಟಗಾರನ ಪತ್ನಿ!!

ಹೌದು, ಮಹಿಳೆಯನ್ನು ಆರೈಕೆ ಮಾಡಿದ ಎಲ್ಲರೂ ಕೂಡ ಮಹಿಳೆ ಹೇಳಿದ್ದನ್ನು ಕೇಳಿ ಶಾಕ್ ಆಗಿದ್ದಾರೆ. ಅಂದಹಾಗೆ ಮಹಿಳೆಯ ಹೆಸರು ರೇಖಾ ಶ್ರೀವಾಸ್ತವ ಮತ್ತು ಅವರು ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಅವರ ಪತ್ನಿ ಎಂದು ಹೇಳಿಕೊಂಡಿದ್ದಾರೆ. ಇವರು ಕೆಲವು ವರ್ಷಗಳ ಕಾಲ ದುಬೈನಲ್ಲಿ ವಾಸವಿದ್ದು, ವಿಮಾನಯಾನ ಸಂಸ್ಥೆಯ ಮಾಲೀಕರಾಗಿದ್ದರು. ಬಳಿಕ ಕ್ರಿಕೆಟಿಗ ಸಲೀಂ ದುರಾನಿ ಅವರನ್ನು ವಿವಾಹವಾಗಿದ್ದಾರೆ. ಇನ್ನು ದುರಾನಿ ಎರಡು ವರ್ಷಗಳ ಹಿಂದೆ ನಿಧನರಾದರು. ಅದಾದ ನಂತರ, ಅವರು ಬೀದಿಗೆ ಬಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಇನ್ನು ಅವರು ದುರಾನಿಅವರೊಂದಿಗೆ ಅನೇಕ ಸ್ಥಳಗಳಿಗೆ ಹೋಗಿದ್ದರು. ಅವರ ಪ್ರತಿಯೊಂದು ಪಂದ್ಯದಲ್ಲೂ ಈ ಮಹಿಳೆ ಹಾಜರಿದ್ದರು. ಆ ಸಮಯದಲ್ಲಿ ಅವರು ಅನೇಕ ರಾಜರು ಮತ್ತು ಮಹಾರಾಜರನ್ನು ಭೇಟಿಯಾಗಿದ್ದಾರೆ. ವಿಶೇಷವಾಗಿ ಗುಜರಾತ್ ಮಹಾರಾಜರನ್ನು ಭೇಟಿಯಾಗಿರುವುದಾಗಿ ಮಾಹಿತಿ ನೀಡಿದ್ದಾರೆ. ಕೆಲವರ ಪ್ರಕಾರ, ಸಲೀಂ ದುರಾನಿಗೆ ಸಂಬಂಧಿಸಿದ ಘಟನೆಗಳಲ್ಲಿ ರೇಖಾ ಶ್ರೀವಾಸ್ತವ ಅವರ ಹೆಸರು ಕಂಡುಬರುವುದಿಲ್ಲ.

Comments are closed.