ಕಾರವಾರದಲ್ಲಿ ಜಿಪಿಎಎಸ್ ಟ್ರ್ಯಾಕರ್ ಸೀಗಲ್ ಹಕ್ಕಿ: ಸತ್ಯ ಬಿಚ್ಚಿಟ್ಟ ಎಸ್ಪಿ


ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕಡಲತೀರದಲ್ಲಿ ದೊರೆತ ಜಿಪಿಎಸ್ ಟ್ರ್ಯಾಕರ್ ಅಳವಡಿಸಿರುವ ಹಕ್ಕಿಯೊಂದು ಪತ್ತೆಯಾಗಿದ್ದು, ಈ ಹಕ್ಕಿಯ ಕಾಲಿನಲ್ಲಿರುವ ರಿಂಗ್ ಮತ್ತು ಬೆನ್ನ ಮೇಲಿನ ಎಲೆಕ್ಟ್ರಾನಿಕ್ ಡಿವೈಸ್ ಕುರಿತು ಫಾರೆನ್ಸಿಕ್ ವಿಭಾಗಕ್ಕೆ ರವಾನೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಇದು ಸೈಬೀರಿಯನ್ ವಲಸೆ ಹಕ್ಕಿಯಾಗಿದ್ದು, ಇದರ ಮೇಲೆ ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್ ವತಿಯಿಂದ ಸಂಶೋಧನೆಗಾಗಿ ಜಿಪಿಎಸ್ ಅಳವಡಿಸಿರುವ ಸಾಧ್ಯತೆಯಿದೆ. ಪಕ್ಷಿಗಳ ಚಲನವಲನ ಮತ್ತು ವಲಸೆ ದಾರಿಯನ್ನು ಅಧ್ಯಯನ ಮಾಡಲು ಇಂತಹ ಡಿವೈಸ್ಗಳನ್ನು ಅಳವಡಿಸಲಾಗುತ್ತದೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ಪಕ್ಷಿ ಅಧ್ಯಯನ ಕಾರ್ಯಕ್ರಮದ ಭಾಗವಾಗಿ ಈ ಹಕ್ಕಿಗೆ ಟ್ರ್ಯಾಕರ್ ಅಳವಡಿಸಿರುವ ಶಂಕೆಯಿದೆ. ಟ್ರ್ಯಾಕರ್ ಮೇಲೆ ಒಂದು ಇಮೇಲ್ ಐಡಿ ಕೂಡ ಇದ್ದು, ‘ಪಕ್ಷಿ ಕಂಡುಬಂದರೆ ಸಂಪರ್ಕಿಸಿ’ ಎಂಬ ಸಂದೇಶವಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಸಾಮಾನ್ಯವಾಗಿ ಅರಣ್ಯ ಇಲಾಖೆಗಳು ಪಕ್ಷಿಗಳ ಅಧ್ಯಯನಕ್ಕೆ ಕಾಲರ್ ಐಡಿ ಬಳಸುತ್ತವೆ. ಆದರೆ ಕಾರವಾರದ ಕಡಲತೀರವು ಆಯಕಟ್ಟಿನ ಪ್ರದೇಶವಾಗಿರುವುದರಿಂದ ಭದ್ರತೆಯ ದೃಷ್ಟಿಯಿಂದ ನಾವು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದೇವೆ’ ಎಂದು ಎಸ್ಪಿ ದೀಪನ್ ಎನ್. ಎನ್. ಸ್ಪಷ್ಟಪಡಿಸಿದ್ದಾರೆ.

Comments are closed.