ರೇಣುಕಾಸ್ವಾಮಿ ಕೇಸ್‌: ಎ1 ಪವಿತ್ರಾ ಗೌಡ ಇರುವ ಸೆಲ್‌ಗೆ ಟಿವಿ, ಕೋರ್ಟ್‌ ಸೂಚನೆ

Share the Article

Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಕೋರ್ಟ್‌ನಲ್ಲಿ ಇಂದು ನಡೆದಿದ್ದು, ಪ್ರಮುಖ ಆರೋಪಿಗಳಾದ ಪವಿತ್ರಾ ಗೌಡ, ದರ್ಶನ್‌ ಮುಂತಾದವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಿದ್ದಾರೆ.

ಬೆಂಗಳೂರಿನ 57 ನೇ ಸಿಸಿಹೆಚ್‌ ಕೋರ್ಟ್‌ನಲ್ಲಿ ಇಂದು ವಿಚಾರಣೆ ಆರಂಭ ಆಗಿದ್ದು, ಟಿವಿ, ರೇಡಿಯೋ, ದಿನಪತ್ರಿಕೆ, ಮ್ಯೂಸಿಕ್‌, ಮೆಡಿಟೇಷನ್‌ ಹಾಗೂ ಮನೆ ಊಟ ಬೇಕು ಎಂದು ಪವಿತ್ರಾ ಗೌಡ ಪರವಾಗಿ ಅವರ ವಕೀಲರಾದ ಬಾಲವ್‌ ವಾದ ಮಾಡಿದ್ದಾರೆ.

ಪವಿತ್ರಾ ಗೌಡ ಇರುವ ಸೆಲ್​ಗೆ ಟಿವಿ ಅಳವಡಿಸಲು ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್​ ಜಡ್ಜ್ ಸೂಚನೆ ನೀಡಿದ್ದಾರೆ. ಆರೋಪಿಗೆ ದಿನಪತ್ರಿಕೆ, ಗ್ರಂಥಾಲಯದ ಪುಸ್ತಕ ಒದಗಿಸಲೂ ಸೂಚಿಸಲಾಗಿದೆ. ಈ ಮೊದಲು ನಟ ದರ್ಶನ್ ಇರುವ ಸೆಲ್​​ಗೂ ಟಿವಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಈಗ ಪವಿತ್ರಾ ಗೌಡ ಅವರಿಗೆ ಟಿವಿ ಭಾಗ್ಯ ಸಿಕ್ಕಿದೆ.

Comments are closed.