ಹೊಸ ವರ್ಷ 2026 ಸಂಭ್ರಮ: ಬೆಂಗಳೂರು ಪೊಲೀಸರಿಂದ ಕಟ್ಟುನಿಟ್ಟಿನ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಹೊಸ ವರ್ಷ 2026ರ ಆಗಮನಕ್ಕೆ ಇನ್ನೇನು ಬೆರಳೆಣಿಕೆಯ ಕೆಲವೇ ದಿನಗಳು ಬಾಕಿ ಇರುವಂತೆ. ಹೊಸ ವರ್ಷವನ್ನು ಸ್ವಾಗತಿಸಲು ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳು ಸಜ್ಜಾಗುತ್ತಿವೆ. ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ ಸೂಕ್ತ ನಿಗಾವಹಿಸಲು ಸೂಕ್ತ ಕ್ರಮ ಕೈಗೊಳ್ಳುತ್ತಿವೆ.

ಬರುವ ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ಯಾವುದೇ ಅವಘಡ, ದುರಂತ ಸಂಭವಿಸದಂತೆ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಬೆಂಗಳೂರು ಪೊಲೀಸ್ ಇಲಾಖೆ ಹಾಗೂ ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ಸೇರಿ ಬೆಂಗಳೂರಿನ ಪಬ್, ಬಾರ್ ಮತ್ತು ಕ್ಲಬ್ ಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿವೆ.
ಅವುಗಳಲ್ಲಿ ಹೊಸ ವರ್ಷಾಚರಣೆ ಸಮಯದಲ್ಲಿ ಪಬ್, ಕ್ಲಬ್ ಗಳಲ್ಲಿ ಧ್ವನಿವರ್ಧಕದ ಸೌಂಡ್ ಎಷ್ಟಿರಬೇಕು, ಯಾವೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತಗೆದುಕೊಳ್ಳಬೇಕು? ಎಲ್ಇಡಿ ಸ್ಕ್ರೀನ್ ಹಾಕಿದರೆ, ಏನೆಲ್ಲಾ ಸುರಕ್ಷತಾ ಮಾನದಂಡಗಳ ಕುರಿತು ಸಲಹೆ ಸೂಚನೆ ನೀಡಲಾಗಿದೆ. ಜೊತೆಗೆ ಸರ್ಕಾರದಿಂದಲೂ ಪಬ್, ಬಾರ್, ಕ್ಲಬ್ಬುಗಳಿಗೆ ನೋಟಿಸ್ ನೀಡಲಾಗಿದೆ. ಬೆಂಗಳೂರಿನ ಎಂಜಿ ರಸ್ತೆ , ಚರ್ಚ್ ಸ್ಟ್ರೀಟ್ ರೋಡ್ ಹಾಗೂ ಬ್ರಿಗೇಡ್ ರಸ್ತೆ ಸೇರಿದಂತೆ ಸಂಭ್ರಮಾಚರಣೆ ನಡೆಯುವ ರಸ್ತೆಗಳ ನೆಲ ಮಹಡಿ, ಅಂಡರ್ ಪಾಸ್ ಬಂದ್ ಮಾಡಲಾಗುತ್ತದೆ ಎನ್ನುವ ಸೂಚನೆ ಬಂದಿದೆ.
ಹೊಸ ವರ್ಷಾಚರಣೆ ನಿಯಮ ಏನಿರಲಿದೆ?
*ಹೊಸ ವರ್ಷದ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ಮಾಡಲಾಗಿದೆ.
*ಸಂಭ್ರಮಾಚರಣೆಗೆ ನಿಗದಿತ ಸಮಯ ಪಾಲನೆ ಕಡ್ಡಾಯ
*ಕಡ್ಡಾಯ ಧ್ವನಿವರ್ಧಕ ಪರವಾನಗಿ ಪಡೆಯಬೇಕು. ಧ್ವನಿವರ್ಧಕದ ತೀವ್ರತೆ ರಾತ್ರಿ ಹೊತ್ತು, ಜನವಸತಿ ಪ್ರದೇಶಗಳಲ್ಲಿ 45 DB ಇರಬೇಕು. ಕಮರ್ಷಿಯಲ್ ಏರಿಯಾದಲ್ಲಿ– 55 DB ಹಾಗೂ ಇಂಡಸ್ಟ್ರಿಯಲ್ ಪ್ರದೇಶಗಳಲ್ಲಿ ಮಿತಿ 70 DB ನಿಗದಿ.
*ಸ್ಥಳಾವಕಾಶ ಇದ್ದಷ್ಟೇ ತಕ್ಕಂತೆ ಪಾಸ್/ ಟಿಕೇಟ್ ನೀಡಬೇಕು
*ನೆಲ ಮಹಡಿ, ಪಾರ್ಕಿಂಗ್ ಹಾಗೂ ಟೆರೆಸ್ ಗಳಲ್ಲಿ ಪಾರ್ಟಿ ಆಯೋಜನೆ ಬ್ಯಾನ್
*ಹೋಟೆಲ್, ಕ್ಲಬ್, ಬಾರ್, ಪಬ್ ಒಳಭಾಗಕ್ಕೆ ಮಾತ್ರ LED
*ಸಾರ್ವಜನಿಕರಿಗೆ ಕಾಣುವಂತೆ LED ಹಾಕಲು ಅನುಮತಿ ಇಲ್ಲ
*ಭದ್ರತೆ ದೃಷ್ಟಿಯಿಂದ ಗ್ರಾಹಕರ ಸ್ಕ್ರಿನಿಂಗ್/ ತಪಾಸಣೆ ಮಾಡಬೇಕು
*ಕಾರ್ಯಕ್ರಮದಲ್ಲಿ ಅಗ್ನಿ ನಿರೋಧಕ ಸಾಧನ ಬಳಕೆ ಆಗಬೇಕು
*ಕಾಲ್ತುಳಿತ ಉಂಟಾಗದಂತೆ ನೋಡಿಕೊಳ್ಳಬೇಕು
*ತುರ್ತು ನಿರ್ಗಮ ರಸ್ತೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು
*ಹೋಟೆಲ್ ಗಳ ಪ್ರವೇಶ, ನಿರ್ಗಮನ, ಪಾರ್ಕಿಂಗ್, ಸುತ್ತಮುತ್ತ ಸಿಸಿ ಕ್ಯಾಮರಾ ಕಡ್ಡಾಯ
*ಹೋಟೆಲ್, ಬಾರ್, ಪಬ್, ಕ್ಲಬ್ಬಿನಲ್ಲಿ ಮಾದಕ ದ್ರವ್ಯ ಬಳಕೆ ಮಾರಾಟ ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು
*ಕಾರ್ಯಕ್ರಮದ ಸ್ಥಳದಲ್ಲಿ ಧೂಮಪಾನಕ್ಕೆ ಅವಕಾಶ ಇಲ್ಲ, ಹಾಗೂ NO SMOKING/ NO DRUGS ಫಲಕ ಅಳವಡಿಸಬೇಕು
*ಹೊಸ ವರ್ಷಕ್ಕೆ ಆಗಮಿಸುವ ಸೆಲೆಬ್ರಿಟೀಸ್, ಅತಿಥಿ, ಕಲಾವಿದರ ಬಗ್ಗೆ ಮೊದಲೇ ಪೊಲೀಸ್ ಇಲಾಖೆಗೆ ತಿಳಸಬೇಕು
*ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್ ಗಳಲ್ಲಿ ಮಹಿಳೆಯರಿಗೆ ಭದ್ರತೆ
ಮಹಿಳೆಯರ ರಕ್ಷಣೆ, ಅಹಿತಕರ ಘಟನೆ ನಿಯಂತ್ರಣಕ್ಕೆ ಹೊಸ ವರ್ಷದ ಸಂಭ್ರಮಾಚರಣೆಯ ದಿನ ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಎಂಜಿ ರಸ್ತೆ ಸೇರಿದಂತೆ ಮೂರು ರಸ್ತೆಗಳ ಬೇಸ್ಮೆಂಟ್ ಅಂಗಡಿಗಳು, ನೆಲ ಮಹಡಿ ಅಂಗಡಿಗಳು ಹಾಗೂ ಅಂಡರ್ ಪಾಸ್ ಬಂದ್ ಮಾಡುವಂತೆ ಬ್ರಿಗೇಡ್ ರಸ್ತೆ ಸಂಘಟನೆ ಹೇಳಿದೆ. ಹೊಸ ವರ್ಷದ ಸಾಮ್ರಾಜ್ಯ ಸಂಭ್ರಮಾಚರಣೆ ಕಟ್ಟುನಿಟ್ಟಿನ ಕಾನೂನು ಕಟ್ಟಳೆಯ ನಜರಿನ ಕೆಳಗೆ ನಡೆಯಬೇಕಿದೆ.ಬೆಂಗಳೂರು: ಹೊಸ ವರ್ಷ 2026ರ ಆಗಮನಕ್ಕೆ ಇನ್ನೇನು ಬೆರಳೆಣಿಕೆಯ ಕೆಲವೇ ದಿನಗಳು ಬಾಕಿ ಇರುವಂತೆ. ಹೊಸ ವರ್ಷವನ್ನು ಸ್ವಾಗತಿಸಲು ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳು ಸಜ್ಜಾಗುತ್ತಿವೆ. ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ ಸೂಕ್ತ ನಿಗಾವಹಿಸಲು ಸೂಕ್ತ ಕ್ರಮ ಕೈಗೊಳ್ಳುತ್ತಿವೆ.
ಬರುವ ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ಯಾವುದೇ ಅವಘಡ, ದುರಂತ ಸಂಭವಿಸದಂತೆ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಬೆಂಗಳೂರು ಪೊಲೀಸ್ ಇಲಾಖೆ ಹಾಗೂ ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ಸೇರಿ ಬೆಂಗಳೂರಿನ ಪಬ್, ಬಾರ್ ಮತ್ತು ಕ್ಲಬ್ ಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿವೆ.
ಅವುಗಳಲ್ಲಿ ಹೊಸ ವರ್ಷಾಚರಣೆ ಸಮಯದಲ್ಲಿ ಪಬ್, ಕ್ಲಬ್ ಗಳಲ್ಲಿ ಧ್ವನಿವರ್ಧಕದ ಸೌಂಡ್ ಎಷ್ಟಿರಬೇಕು, ಯಾವೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತಗೆದುಕೊಳ್ಳಬೇಕು? ಎಲ್ಇಡಿ ಸ್ಕ್ರೀನ್ ಹಾಕಿದರೆ, ಏನೆಲ್ಲಾ ಸುರಕ್ಷತಾ ಮಾನದಂಡಗಳ ಕುರಿತು ಸಲಹೆ ಸೂಚನೆ ನೀಡಲಾಗಿದೆ. ಜೊತೆಗೆ ಸರ್ಕಾರದಿಂದಲೂ ಪಬ್, ಬಾರ್, ಕ್ಲಬ್ಬುಗಳಿಗೆ ನೋಟಿಸ್ ನೀಡಲಾಗಿದೆ. ಬೆಂಗಳೂರಿನ ಎಂಜಿ ರಸ್ತೆ , ಚರ್ಚ್ ಸ್ಟ್ರೀಟ್ ರೋಡ್ ಹಾಗೂ ಬ್ರಿಗೇಡ್ ರಸ್ತೆ ಸೇರಿದಂತೆ ಸಂಭ್ರಮಾಚರಣೆ ನಡೆಯುವ ರಸ್ತೆಗಳ ನೆಲ ಮಹಡಿ, ಅಂಡರ್ ಪಾಸ್ ಬಂದ್ ಮಾಡಲಾಗುತ್ತದೆ ಎನ್ನುವ ಸೂಚನೆ ಬಂದಿದೆ.
ಹೊಸ ವರ್ಷಾಚರಣೆ ನಿಯಮ ಏನಿರಲಿದೆ?
*ಹೊಸ ವರ್ಷದ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ಮಾಡಲಾಗಿದೆ.
*ಸಂಭ್ರಮಾಚರಣೆಗೆ ನಿಗದಿತ ಸಮಯ ಪಾಲನೆ ಕಡ್ಡಾಯ
*ಕಡ್ಡಾಯ ಧ್ವನಿವರ್ಧಕ ಪರವಾನಗಿ ಪಡೆಯಬೇಕು. ಧ್ವನಿವರ್ಧಕದ ತೀವ್ರತೆ ರಾತ್ರಿ ಹೊತ್ತು, ಜನವಸತಿ ಪ್ರದೇಶಗಳಲ್ಲಿ 45 DB ಇರಬೇಕು. ಕಮರ್ಷಿಯಲ್ ಏರಿಯಾದಲ್ಲಿ– 55 DB ಹಾಗೂ ಇಂಡಸ್ಟ್ರಿಯಲ್ ಪ್ರದೇಶಗಳಲ್ಲಿ ಮಿತಿ 70 DB ನಿಗದಿ.
*ಸ್ಥಳಾವಕಾಶ ಇದ್ದಷ್ಟೇ ತಕ್ಕಂತೆ ಪಾಸ್/ ಟಿಕೇಟ್ ನೀಡಬೇಕು
*ನೆಲ ಮಹಡಿ, ಪಾರ್ಕಿಂಗ್ ಹಾಗೂ ಟೆರೆಸ್ ಗಳಲ್ಲಿ ಪಾರ್ಟಿ ಆಯೋಜನೆ ಬ್ಯಾನ್
*ಹೋಟೆಲ್, ಕ್ಲಬ್, ಬಾರ್, ಪಬ್ ಒಳಭಾಗಕ್ಕೆ ಮಾತ್ರ LED
*ಸಾರ್ವಜನಿಕರಿಗೆ ಕಾಣುವಂತೆ LED ಹಾಕಲು ಅನುಮತಿ ಇಲ್ಲ
*ಭದ್ರತೆ ದೃಷ್ಟಿಯಿಂದ ಗ್ರಾಹಕರ ಸ್ಕ್ರಿನಿಂಗ್/ ತಪಾಸಣೆ ಮಾಡಬೇಕು
*ಕಾರ್ಯಕ್ರಮದಲ್ಲಿ ಅಗ್ನಿ ನಿರೋಧಕ ಸಾಧನ ಬಳಕೆ ಆಗಬೇಕು
*ಕಾಲ್ತುಳಿತ ಉಂಟಾಗದಂತೆ ನೋಡಿಕೊಳ್ಳಬೇಕು
*ತುರ್ತು ನಿರ್ಗಮ ರಸ್ತೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು
*ಹೋಟೆಲ್ ಗಳ ಪ್ರವೇಶ, ನಿರ್ಗಮನ, ಪಾರ್ಕಿಂಗ್, ಸುತ್ತಮುತ್ತ ಸಿಸಿ ಕ್ಯಾಮರಾ ಕಡ್ಡಾಯ
*ಹೋಟೆಲ್, ಬಾರ್, ಪಬ್, ಕ್ಲಬ್ಬಿನಲ್ಲಿ ಮಾದಕ ದ್ರವ್ಯ ಬಳಕೆ ಮಾರಾಟ ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು
*ಕಾರ್ಯಕ್ರಮದ ಸ್ಥಳದಲ್ಲಿ ಧೂಮಪಾನಕ್ಕೆ ಅವಕಾಶ ಇಲ್ಲ, ಹಾಗೂ NO SMOKING/ NO DRUGS ಫಲಕ ಅಳವಡಿಸಬೇಕು
*ಹೊಸ ವರ್ಷಕ್ಕೆ ಆಗಮಿಸುವ ಸೆಲೆಬ್ರಿಟೀಸ್, ಅತಿಥಿ, ಕಲಾವಿದರ ಬಗ್ಗೆ ಮೊದಲೇ ಪೊಲೀಸ್ ಇಲಾಖೆಗೆ ತಿಳಸಬೇಕು
*ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್ ಗಳಲ್ಲಿ ಮಹಿಳೆಯರಿಗೆ ಭದ್ರತೆ
ಮಹಿಳೆಯರ ರಕ್ಷಣೆ, ಅಹಿತಕರ ಘಟನೆ ನಿಯಂತ್ರಣಕ್ಕೆ ಹೊಸ ವರ್ಷದ ಸಂಭ್ರಮಾಚರಣೆಯ ದಿನ ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಎಂಜಿ ರಸ್ತೆ ಸೇರಿದಂತೆ ಮೂರು ರಸ್ತೆಗಳ ಬೇಸ್ಮೆಂಟ್ ಅಂಗಡಿಗಳು, ನೆಲ ಮಹಡಿ ಅಂಗಡಿಗಳು ಹಾಗೂ ಅಂಡರ್ ಪಾಸ್ ಬಂದ್ ಮಾಡುವಂತೆ ಬ್ರಿಗೇಡ್ ರಸ್ತೆ ಸಂಘಟನೆ ಹೇಳಿದೆ. ಹೊಸ ವರ್ಷದ ಸಾಮ್ರಾಜ್ಯ ಸಂಭ್ರಮಾಚರಣೆ ಕಟ್ಟುನಿಟ್ಟಿನ ಕಾನೂನು ಕಟ್ಟಳೆಯ ನಜರಿನ ಕೆಳಗೆ ನಡೆಯಬೇಕಿದೆ.

Comments are closed.