Raj B Shetty : ರಿಷಬ್ ಶೆಟ್ಟಿ ಜೊತೆ ಉಂಟಾ ಮುನಿಸು? ಕೊನೆಗೂ ಎಲ್ಲಾ ಸತ್ಯ ರಿವಿಲ್ ಮಾಡಿದ ರಾಜ್ ಬಿ ಶೆಟ್ಟಿ

Raj B Shetty: ಕನ್ನಡ ಚಿತ್ರರಂಗದಲ್ಲಿ ಕರಾವಳಿಯ ಜೋಡೆತ್ತುಗಳು ಎಂದೇ ಖ್ಯಾತಿ ಪಡೆದಿದ್ದ ರಾಜ್ ಬಿ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಅವರ ಮುನಿಸು ಉಂಟಾಗಿದೆ ಎಂಬ ವಿಚಾರ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಕಾರಣ ರಾಜ್ ಬಿ ಶೆಟ್ಟಿ ನಿರ್ದೇಶನದ 45 ಮೂವಿಗೆ ರಿಷಬ್ ಶೆಟ್ಟಿಯವರು ಶುಭಾಶಯಗಳನ್ನು ಕೋರಿದ್ದು, ಅದರಲ್ಲಿ ಉದ್ದೇಶಪೂರ್ವಕವಾಗಿ ರಾಜ್ ಬಿ ಶೆಟ್ಟಿ ಅವರ ಹೆಸರನ್ನು ಉಲ್ಲೇಖ ಮಾಡಿಲ್ಲ ಎಂದು ಹೇಳಲಾಗುತ್ತಿದೆ. ಇದೀಗ ಸಂದರ್ಶನ ಒಂದರಲ್ಲಿ ಈ ವಿಚಾರದ ಕುರಿತು ಸ್ವತಃ ರಾಜ್ ಬಿ ಶೆಟ್ಟಿ ಅವರೇ ಮಾತನಾಡಿದ್ದಾರೆ.

ಹೌದು, ‘ರಿಷಬ್ ಯಾರನ್ನೂ ದೂರ ತಳ್ಳುವ ವ್ಯಕ್ತಿ ಅಲ್ಲ’ ಎಂದಿದ್ದಾರೆ. ಯಸ್, ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ, ರಕ್ಷಿತ್ ಶೆಟ್ಟಿ ಸ್ಯಾಂಡಲ್ ವುಡ್ ನ ಶೆಟ್ಟಿ ಗ್ಯಾಂಗ್ ಎಂದೇ ಪರಿಚಿತರು. ಆದರೆ ಈಗ ರಿಷಬ್ ಮತ್ತು ರಾಜ್ ನಡುವೆ ಎಲ್ಲವೂ ಸರಿಯಿಲ್ವಾ ಎಂಬ ಅನುಮಾನಗಳು ಮೂಡಿದ್ದವು. ಕಾರಣ ಇತ್ತೀಚೆಗೆ ’45’ ಸಿನಿಮಾ ಟ್ರೇಲರ್ ಬಗ್ಗೆ ಹೊಗಳುವಾಗ ರಿಷಬ್ ಅವರು ಎಲ್ಲಿಯೂ ರಾಜ್ ಹೆಸರನ್ನು ಉಲ್ಲೇಖಿಸಿಲ್ಲ. ಇದು ಚರ್ಚೆಗೆ ಕಾರಣ ಆಗಿತ್ತು. ಈ ಬಗ್ಗೆ ಈಗ ರಾಜ್ ಬಿ ಶೆಟ್ಟಿ ಸ್ಪಷ್ಟನೆ ಕೊಟ್ಟಿದ್ದಾರೆ.
ಈ ಕುರಿತಾಗಿ ಮಾತನಾಡಿದ ರಾಜ್ ಬಿ ಶೆಟ್ಟಿ ಅವರು ‘ಮೊದಲು ಐದು ನಿಮಿಷ ರಿಷಬ್ ರೆಕಾರ್ಡ್ ಮಾಡಿದ್ದರಂತೆ. ಆದರೆ, ರೆಕಾರ್ಡ್ ಆಗಿಲ್ಲ. ಮತ್ತೆ ರೆಕಾರ್ಡ್ ಮಾಡಬೇಕಾಯಿತು. ಬಹುಶಃ ಆ ಸಮಯದಲ್ಲಿ ಹೆಸರು ಹೇಳಲು ಮರೆತಿರಬಹುದು’ ಎಂದು ರಾಜ್ ಅವರು ಮಾಧ್ಯಮಕ್ಕೆ ನೀಡಿದ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.
ಅಲ್ಲದೆ ರಿಷಬ್ ಮತ್ತು ನನ್ನ ನಡುವೆ ವೈಮನಸ್ಯಗಳೇನೂ ಇಲ್ಲ. ಸು ಫ್ರಮ್ ಸೋ ಸಿನಿಮಾ ಸಂದರ್ಭದಲ್ಲೂ ನನಗೆ ವಿಶ್ ಮಾಡಿದ್ರು, ಹೊಗಳಿದ್ರು. ಈಗ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡುವ ಅಗತ್ಯ ಬಂದಿಲ್ಲ. ಬಂದರೆ ಖಂಡಿತಾ ಒಟ್ಟಿಗೆ ಕೆಲಸ ಮಾಡುತ್ತೇವೆ. ಈಗ ಎಲ್ಲರೂ ಅವರವರ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಒಟ್ಟಿಗೇ ಕೆಲಸ ಮಾಡುವ ಅನಿವಾರ್ಯತೆ ಬಂದಿಲ್ಲ. ಬಂದಾಗ ನೋಡೋಣ’ ಎಂದಿದ್ದಾರೆ.
Comments are closed.