ಬೆಳಗಾವಿ: ಶಿಕ್ಷಕರ ನೇಮಕಾತಿ, ಮುಂಬಡ್ತಿ ಕುರಿತು ಸಚಿವ ಮಧು ಬಂಗಾರಪ್ಪರಿಂದ ಸಿಹಿ ಸುದ್ದಿ

Share the Article

ಬೆಳಗಾವಿ: ಸರಕಾರಿ ಶಾಲೆ ಶಿಕ್ಷಕರಿಗೆ ಒಂದೇ ಸಲ ಮುಂಬಡ್ತಿ ನೀಡುವ ಕುರಿತು ಇನ್ನೆರಡು ತಿಂಗಳಲ್ಲಿ ತೀರ್ಮಾನ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ವಿಧಾನ ಪರಿಷತ್‌ನಲ್ಲಿ ನಿಯಮ 330 ರ ಅಡಿ ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಬಡ್ತಿ ಮತ್ತು ಇತರ ಸೌಲಭ್ಯಗಳ ಕುರಿತಾಗಿ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಸರಕಾರಿ ಶಾಲೆ ಶಿಕ್ಷಕರಿಗೆ ಒಂದೇ ಸಲ ಮುಂಬಡ್ತಿ ನೀಡುವ ಕುರಿತು ಎರಡು ತಿಂಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಅನುದಾನಿತ ಶಾಲೆಗಳಿಗೂ ಶಿಕ್ಷಕರ ನೇಮಕಾತಿ ನಡೆಸಲಾಗುವುದು ಎಂದು ಹೇಳಿದ್ದು, ಶಿಕ್ಷಕರ ಬಡ್ತಿಗೆ ಮಾಹಿತಿ ಸಂಗ್ರಹ ಮಾಡುತ್ತಿದ್ದು, ಹಂತ ಹಂತವಾಗಿ ಬಡ್ತಿ ನೀಡದೆ ಒಂದೇ ಸಲ ಬಡ್ತಿ ನೀಡಲು ಕ್ರಮ ಮಾಡಲಾಗುವುದು. ಅನುದಾನಿತ ಶಾಲೆಗಳಲ್ಲಿ 2015 ರಿಂದ 2020 ರವರೆಗೆ ನೇಮಕಾತಿ ನಡೆದಿಲ್ಲ. ನೇಮಕಾತಿ ಪ್ರಕ್ರಿಯೆ ನಡೆಸಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರು ಪಾಠ ಮಾಡಲು ಲಭ್ಯವಿರುವಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

Comments are closed.