ದೈವವನ್ನು ಅಣಕಿಸಿದ ಭಕ್ತ, ಸುಳಿ ಸುತ್ತಿ ಬಂದು ಗುರಾಣಿಯಿಂದ ಹೊಡೆದ ದೈವ, ಯುವಕ ಆಸ್ಪತ್ರೆಗೆ!


ಕಾಸರಗೋಡು: ಕಾಸರಗೋಡು ಜಿಲ್ಲೆಯ ಪಳ್ಳಿಕೆರೆಯ ಕ್ಷೇತ್ರವೊಂದರ ಉತ್ಸವದ ವೇಳೆ ದೈವದ ಹೊಡೆತದಿಂದ ಯುವಕನೋರ್ವ ಸ್ಮೃತಿ ತಪ್ಪಿ ಬಿದ್ದ ಘಟನೆ ವರದಿಯಾಗಿದೆ. ದೈವದ ಬಲವಾದ ಏಟಿಗೆ ಬೀಳುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಘಟನೆ ನೀಲೇಶ್ವರದ ರೈಲ್ವೆ ರಸ್ತೆ ಮೇಲ್ಸೇತುವೆಯ ಪಕ್ಕದಲ್ಲಿರುವ ಪಳ್ಳಿಕೆರೆಯ ವಿಷ್ಣುಮೂರ್ತಿ ದೇವಸ್ಥಾನದ ಉತ್ಸವದ ವೇಳೆ, ಪೂಮಾರುತನ್ ದೇವರ ‘ವೆಲ್ಲಟ್ಟಂ’ ಆಚರಣೆ ಸಂದರ್ಭ ನಡೆದಿದೆ. ಪ್ರದರ್ಶನದ ವೇಳೆ ಥೇಯ್ಯಂ ದೈವನಾರ್ಕನು ಮರದ ಗುರಾಣಿಯಿಂದ ಯುವಕನಿಗೆ ಹೊಡೆದದ್ದಾಗಿ ವರದಿಯಾಗಿದೆ.

ಪೂಮರುದನ್ ದೈವದ ವೆಳ್ಳಾಟ ನಡೆಯುತ್ತಿದ್ದಂತೆ ದೈವ ಹೊಡೆದಿರುವುದಾಗಿಯೂ, ಈ ವೇಳೆ ಗಾಯಗೊಂಡ ವ್ಯಕ್ತಿ ನೆಲಕ್ಕೆ ಬೀಳುವ ದೃಶ್ಯ ಬಹಿರಂಗಗೊಂಡಿದೆ. ನೀಲೇಶ್ವರ ನಿವಾಸಿ ಮನು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆತ ದೈವವನ್ನು ಅಣಕಿಸಿದ್ದಾಗಿ, ಅದರಿಂದ ಕೋಪಗೊಂಡ ದೈವ ಏಟು ಕೊಟ್ಟದ್ದಾಗಿ ವರದಿಯಾಗಿದೆ.

Comments are closed.