Rishab Shetty : ರಣವೀರ್ ಸಿಂಗ್ ಧೈವವನ್ನು ಅಣಕಿಸಿದ ವಿಚಾರ – ‘ನನಗದು ಮುಜುಗರ ಆಗುತ್ತೆ’ ಎಂದ ರಿಷಬ್ ಶೆಟ್ಟಿ

Rishab Shetty: ಗೋವಾದಲ್ಲಿ ನಡೆದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಕಾಂತಾರದ ದೈವವನ್ನು ದೆವ್ವ ಎಂದು ಕರೆದಿದ್ದರು. ಅಲ್ಲದೆ ರಿಷಬ್ ಶೆಟ್ಟಿ ನಟನೆಯನ್ನು ಕಣ್ಣಗಲಿಸಿ ತಮಾಷೆ ಕೂಡ ಮಾಡಿದ್ದರು. ಇದು ರಾಜ್ಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬೆನ್ನಲ್ಲೇ ರಣವೀರ್ ಸಿಂಗ್ ಅವರು ನನ್ನದು ತಪ್ಪಾಯಿತು ಕ್ಷಮಿಸಿ ಎಂದು ಕ್ಷಮೆ ಕೋರಿದ್ದಾರೆ. ಇದೀಗ ಈ ವಿಚಾರವಾಗಿ ಕಾಂತಾರ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿಯವರು ಪ್ರತಿಕ್ರಿಯೆ ನೀಡಿದ್ದಾರೆ.

ಹೌದು, ರಿಷಬ್ ಶೆಟ್ಟಿ ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಬಿಹೈಂಡ್‌ವುಡ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ‘ಕಾಂತಾರ’ ಸಿನಿಮಾ ಮಾಡುವುದು ಎಷ್ಟು ರಿಸ್ಕ್ ಎಂಬುವ ಬಗ್ಗೆ ಮಾತಾಡಿದ್ದಾರೆ. ಈ ವೇಳೆ ರಣ್‌ವೀರ್ ಸಿಂಗ್ ಹೆಸರನ್ನು ತೆಗೆದುಕೊಳ್ಳದೆ, ದೈವವನ್ನು ಅಣಿಸಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
“ನನಗೆ ಅದು ಮುಜುಗರ ಆಗುವಂತೆ ಮಾಡುತ್ತದೆ. ಇಲ್ಲಿ ಬಹುಪಾಲು ಸಿನಿಮಾ ಹಾಗೂ ಅಭಿನಯಕ್ಕೆ ಸಂಬಂಧಿಸಿದ್ದು, ಅದರಲ್ಲಿ ದೈವದ ಅಂಶವು ಅತೀ ಸೂಕ್ಷ್ಮ ಹಾಗೂ ಪವಿತ್ರವಾದದ್ದು. ಎಲ್ಲಿಗೆ ಹೋದರೂ, ಅವರಿಗೆ ದೈವದ ಅನುಕರಣೆಯನ್ನು ಮಾಡದೆ ಇರುವಂತೆ ಕೇಳಿಕೊಳ್ಳುತ್ತೇನೆ. ಇದು ಜನರ ಭಾವನೆಗಳಲ್ಲಿ ಆಳವಾಗಿ ಉಳಿದುಕೊಂಡಿದೆ” ಎಂದು ರಿಷಬ್ ಶೆಟ್ಟಿ ಸಂದರ್ಶನದಲ್ಲಿ ಹೇಳಿದ್ದಾರೆ.
Comments are closed.