ಬೆಂಗಳೂರು-ಕರಾವಳಿ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ರೈಲ್ವೆ ಇಲಾಖೆ

Share the Article

ಬೆಂಗಳೂರು: ನೈರುತ್ಯ ರೈಲ್ವೆ ಇಲಾಖೆಯು ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಮತ್ತು ಶ್ರವಣಬೆಳಗೊಳದಂತಹ ಪುಣ್ಯಕ್ಷೇತ್ರಗಳಿಗೆ ತೆರಳುವ ಪ್ರಯಾಣಿಕರಿಗೆ ಮಹತ್ವದ ಸುದ್ದಿ ನೀಡಿದೆ. ಕಳೆದ ಆರು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಬೆಂಗಳೂರು-ಮಂಗಳೂರು-ಕಾರವಾರ ‘ಗೊಮ್ಮಟೇಶ್ವರ ಎಕ್ಸ್‌ಪ್ರೆಸ್’ (16575/16576) ರೈಲು ಸೇವೆ ಪುನರಾರಂಭಗೊಳ್ಳುವ ಎಲ್ಲಾ ಸಿದ್ಧತೆ ಆಗಿದೆ.

ವಿದ್ಯುದೀಕರಣ ಕಾಮಗಾರಿಗಳಿಂದಾಗಿ ರದ್ದುಗೊಂಡಿದ್ದ ಈ ರೈಲು, ಇನ್ನು ಮುಂದೆ ಯಶವಂತಪುರ ನಿಲ್ದಾಣದಿಂದ ತನ್ನ ನಿಯಮಿತ ಸಂಚಾರವನ್ನು ಮುಂದುವರಿಸಲಿದೆ ಎಂದು ರೈಲ್ವೆ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.

ರೈಲ್ವೆ ಇಲಾಖೆಯು ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌ಗೆ ಮಹತ್ವದ ಸುಧಾರಣೆಗಳನ್ನು ತಂದಿದ್ದು, ‘ವಿಸ್ಟಾಡೋಮ್ ಕೋಚ್’ ಗಳನ್ನು ಅಳವಡಿಸಲಾಗಿದೆ. ಗಾಜಿನ ಕಿಟಕಿಗಳು ಮತ್ತು ಬೃಹತ್ ಗಾಜಿನ ಮೇಲ್ಚಾವಣಿ ಹೊಂದಿರುವ ಈ ಕೋಚ್‌ಗಳ ಮೂಲಕ ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ಮತ್ತು ಮಂಗಳೂರು ಮಾರ್ಗದ ಪ್ರಕೃತಿ ನೋಟ ನೋಡಬಹುದು.

ಇದು ಯಶವಂತಪುರದಿಂದ ಹೊರಟು ಚಿಕ್ಕಬಾಣಾವರ, ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು, ಮತ್ತು ಬಂಟ್ವಾಳ ಮೂಲಕ ಮಂಗಳೂರು ತಲುಪಲಿದೆ. ಪ್ರಯಾಣಿಕರು ರೈಲ್ವೆ ಇಲಾಖೆಯು ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌ಗೆ ಮಹತ್ವದ ಸುಧಾರಣೆಗಳನ್ನು ತಂದಿದೆ. ಬೆಳಗಿನ ಸಮಯದಲ್ಲಿ ಸಂಚರಿಸುವ ಈ ರೈಲಿನಲ್ಲಿ ಪ್ರಯಾಣಿಕರು ಪಶ್ಚಿಮ ಘಟ್ಟಗಳ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ನೆರವಾಗುವ ‘ವಿಸ್ಟಾಡೋಮ್ ಕೋಚ್’ ಗಳನ್ನು ಅಳವಡಿಸಲಾಗಿದೆ. ಗಾಜಿನ ಕಿಟಕಿಗಳು ಮತ್ತು ಬೃಹತ್ ಗಾಜಿನ ಮೇಲ್ಚಾವಣಿ ಹೊಂದಿರುವ ಈ ಕೋಚ್‌ಗಳ ಮೂಲಕ ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ಮತ್ತು ಮಂಗಳೂರು ಮಾರ್ಗದ ಪ್ರಕೃತಿ ನೋಟವನ್ನು ಕಣ್ತುಂಬಿಕೊಳ್ಳಬಹುದು.

ರೈಲಿನ ಸಂಚಾರ ಮಾರ್ಗ ಮತ್ತು ಸಮಯದಲ್ಲಿ ಯಾವುದೇ ಬದಲಾವಣೆಗಳಿಲ್ಲ. ಯಶವಂತಪುರದಿಂದ ಹೊರಟು ಚಿಕ್ಕಬಾಣಾವರ, ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು, ಮತ್ತು ಬಂಟ್ವಾಳ ಮೂಲಕ ಮಂಗಳೂರು ತಲುಪಲಿದೆ.

Comments are closed.