Viral Video : ರೆಸ್ಟೋರೆಂಟ್ ನಲ್ಲಿ ಸಡನ್ ಪ್ಯಾಂಟ್ ಜಾರಿಸಿದ ವ್ಯಕ್ತಿ – ಅಲ್ಲೇ ಕುಳಿತಿದ್ದ ಯುವತಿಯರು ಮಾಡಿದ್ದೇನು?


Viral Video : ರೆಸ್ಟೋರೆಂಟ್ ಒಂದರಲ್ಲಿ ಯುವತಿಯರ ಗುಂಪೊಂದು ಊಟ ಮಾಡುತ್ತಾ ಕುಳಿತಿದ್ದ ವೇಳೆ ಸಡನ್ ಆಗಿ ಎದುರಿಗೆ ಬಂದ ವ್ಯಕ್ತಿ ಒಬ್ಬ ಪ್ಯಾಂಟ್ ಜಾರಿಸಿದ್ದಾನೆ. ಇದನ್ನು ಕಂಡ ಯುವತಿಯರು ಕಕ್ಕಾಬಿಕ್ಕಿಯಾಗಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿದೆ.

ಹೌದು, ಪೆನಾಂಗ್‌ನ ಕೊಪಿಟಿಯಂನ ರೆಸ್ಟೋರೆಂಟ್ ಒಂದರಲ್ಲಿ ಸುಮ್ಮನೆ ಕುಳಿತು ಊಟ ಮಾಡುತ್ತಿದ್ದ ಯುವತಿಯರ ಮುಂದೆ ಹಠಾತ್ತನೆ ಬಂದ ವ್ಯಕ್ತಿಯೊಬ್ಬ ತೀರಾ ಅಸಭ್ಯವಾಗಿ ವರ್ತಿಸಿದ್ದಾನೆ. ವೀಡಿಯೋದಲ್ಲಿ, ಇಬ್ಬರು ಯುವತಿಯರು ಮಾತನಾಡುತ್ತಾ ಊಟ ಮಾಡುತ್ತಾ ಕುಳಿತಿದ್ದರು. ಈ ವೇಳೆ ಅಲ್ಲಿಗೆ ಕುಂಟುತ್ತಾ ಬಂದ ವ್ಯಕ್ತಿ ಏಕಾಏಕಿ ಪ್ಯಾಂಟ್ ಜಾರಿಸಿ ಹಲವಾರು ಸೆಕೆಂಡುಗಳ ಕಾಲ ತನ್ನ ಖಾಸಗಿ ಭಾಗಗಳನ್ನು ಬಹಿರಂಗಪಡಿಸುತ್ತಾ ಯುವತಿಯರನ್ನು ದಿಟ್ಟಿಸಿದ್ದಾನೆ. ಇದು ಯುವತಿಯರನ್ನು ಆಘಾತಕ್ಕೆ ಮತ್ತು ಆತಂಕಕ್ಕೆ ಒಳಗಾಗಿಸಿದೆ.
ಇದಾದ ಬಳಿಕ ಆತ ಏನೂ ನಡೆದೇ ಇಲ್ಲ ಎಂಬಂತೆ ತನ್ನ ಸ್ಥಾನಕ್ಕೆ ಹಿಂದಿರುಗುತ್ತಾನೆ. ಅಲ್ಲದೇ ಅದಾಗಲೇ ಆರ್ಡರ್ ಮಾಡಿದ್ದ ತನ್ನ ಕಾಫಿಯನ್ನು ಒಂದು ಸಿಪ್ ಕುಡಿದನು ಮತ್ತು ಏನೂ ಸಂಭವಿಸಿಲ್ಲ ಎಂಬಂತೆ ವರ್ತಿಸಿದ್ದಾನೆ. ಇನ್ನು ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಮತ್ತೊಬ್ಬ ಗ್ರಾಹಕ ಮತ್ತು ಕೊಪಿಟಿಯಂ ಮಾಲೀಕರು ಮಧ್ಯಪ್ರವೇಶಿಸಿ, ಆ ವ್ಯಕ್ತಿಯನ್ನು ಬೈದು ರೆಸ್ಟೋರೆಂಟ್ ಆವರಣದಿಂದ ಹೊರಹೋಗುವಂತೆ ಕೇಳಿಕೊಂಡರು. ಕೆಲ ಹೊತ್ತಿನ ಮಾತಿನ ಚಕಮಕಿಯ ನಂತರ ವ್ಯಕ್ತಿ ಅಂತಿಮವಾಗಿ ರೆಸ್ಟೋರೆಂಟ್‌ನಿಂದ ಹೊರಹೋಗಿದ್ದಾನೆ.
https://www.instagram.com/reel/DSR0iGjE8WI/?igsh=Z2lhdGJrazlsamJt

Comments are closed.