Delhi : ಹವಮಾನ ವೈಪರಿತ್ಯದಿಂದಾಗಿ ಹಾರದ ಇಂಡಿಗೋ ವಿಮಾನ – ಫ್ಲೈಟ್ ಒಳಗೆ ಲಾಕ್ ಆದ ಕರ್ನಾಟಕ ಸಚಿವರು, ಶಾಸಕರು

Share the Article

Delhi : ಹವಮಾನವಾಗಿ ಪರಿಚಯದಿಂದಾಗಿ ದೆಹಲಿಯಿಂದ ಬೆಳಗಾವಿಗೆ ಹಾರಟ ನಡೆಸಬೇಕಾಗಿದ್ದ ಇಂಡಿಗೋ ವಿಮಾನ ಸಾಕಷ್ಟು ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ವಿಮಾನದೊಳಗಡೆಯೇ ಕರ್ನಾಟಕದ ಶಾಸಕರು, ಸಚಿವರು ಲಾಕ್ ಆಗಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ನಡೆದ ವೋಟ್ ಚೋರಿ ರ್ಯಾಲಿಯಲ್ಲಿ ಭಾಗವಹಿಸಿದ್ದ ಹೆಚ್ಚಿನ ಕಾಂಗ್ರೆಸ್ ಪಕ್ಷದ ಶಾಸಕರು, ಸಚಿವರು ಮತ್ತು ನಾಯಕರು ಬೆಳಗಾವಿಯಲ್ಲಿ ಇಂದು ನಡೆಯುತ್ತಿರುವ ಅಧಿವೇಶನಕ್ಕೆ ತೆರಳಲು ಇಂದು ಬೆಳಗ್ಗೆ ದೆಹಲಿಯಲ್ಲಿ ವಿಮಾನ ಹತ್ತಿದ್ದರು. ಸುಮಾರು ಎರಡು ಗಂಟೆ ಕಳೆದರೂ ವಿಮಾನ ಮೇಲಕ್ಕೆ ಹಾರಾಟ ನಡೆಸಲಿಲ್ಲ. ಈ ಹಿನ್ನಲೆಯಲ್ಲಿ ಶಾಸಕ, ಸಚಿವರು ಮತ್ತು ಮುಖಂಡರು ಇಂಡಿಗೋ ವಿಮಾನದಲ್ಲಿಯೇ ಕಾಯುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ವಿಮಾನದಲ್ಲಿ ಇರುವ ಸಚಿವರ, ಶಾಸಕರ ಪಟ್ಟಿ:

  1. ಎನ್ ಕೋನರೆಡ್ಡಿ, 2. ಬಸನಗೌಡ ಬಾದರ್ಲಿ 3. ಆನಂದ್ ಗದೇವರ್ಮಠ್ 4. ಸಚಿವ ಹೆಚ್ ಕೆ ಪಾಟೀಲ 5. ಸಚಿವೆ ಲಕ್ಷ್ಮೀ ಹೆಬಾಳ್ಕರ್ 6. ಸಚಿವ ಶರಣು ಪ್ರಕಾಶ್ ಪಾಟೀಲ್ 7. ರಾಜು ಗೌಡ 8. ಸಲೀಂ ಅಹಮದ್ 9. ತನ್ವೀರ್ ಸೇಠ್ 10. ಸಚಿವ ಸತೀಶ್ ಜಾರಕಿಹೊಳಿ 11. ಜಿ ಎಸ್ ಪಾಟೀಲ್ 12. ಗುತ್ತೆದಾರ್, 13. ಎಚ್ ಡಿ ರೇವಣ್ಣ 14. ಈಶ್ವರ್ ಖಂಡ್ರೆ 15. ಜೆ ಟಿ ಪಾಟೀಲ್ 16. ಕಾಮಕನೂರ್ 17. ನಾಗೇಂದ್ರ 18. ⁠ಎಂ ಬಿ ಪಾಟೀಲ್ 19. ⁠ಅಲ್ಲಂಪ್ರಭು 20. ⁠ರೆಹಮಾನ್ ಖಾನ್ 21. ⁠ಸಚಿವ ಕೆ ಜಿ ಜಾರ್ಜ್

Comments are closed.