ಉಡುಪಿ: ಆನ್ ಲೈನ್ ಬುಕಿಂಗ್ ಅಟೋ ಚಾಲಕನ ಮೇಲೆ ಲೋಕಲ್ ಆಟೋ ಗ್ಯಾಂಗ್ ಅಟ್ಟಹಾಸ, ಸ್ಟೇಷನ್ ಮೆಟ್ಟಲೇರಿದ ಪ್ರಕರಣ!

ಉಡುಪಿ: ಉಡುಪಿಯಲ್ಲಿ ಮತ್ತೆ ಬಾಡಿಗೆ ಆಟೋ ಪುಂಡಾಟಿಕೆ ಜೋರಾಗಿ ಸದ್ದು ಮಾಡಿದೆ. ಉಡುಪಿಯಲ್ಲಿ ಬಡ ಆಟೋ ಚಾಲಕನಿಗೆ ದೌರ್ಜನ್ಯ ಬಾಡಿಗೆ ಮಾಡುವ ವಿಷಯದಲ್ಲಿ ದರ್ಪ ಮೆರೆಯಲಾಗಿದೆ. ಆನಲೈನ್ ಮೂಲಕ ಆಟೋ ಬುಕಿಂಗ್ ಮಾಡಿ ಗಾಡಿ ಓಡಿಸುತ್ತಿದ್ದ ಬಡ ಆಟೋ ಚಾಲಕನಿಗೆ ದಬಾಯಿಸಿ ದಾದಾಗಿರಿ ನಡೆಸಿದ್ದಾಗಿ ವರದಿಯಾಗಿದೆ. ಈ ಸಂಬಂಧ ಈಗ ವಿಡಿಯೋ ಒಂದು ವೈರಲ್ ಆಗಿದ್ದು ಸದ್ಯ ನೊಂದ ಆಟೋ ಚಾಲಕ ಇತರ ಆನ್ಲೈನ್ ಬುಕಿಂಗ್ ಮೂಲಕ ಬಾಡಿಗೆ ಹೊಡೆಯುವ ಆಟೋ ಮಿತ್ರರ ಜತೆ ಪೊಲೀಸ್ ದೂರು ನೀಡಿದ್ದಾಗಿ ಮಾಹಿತಿ ಲಭ್ಯವಾಗಿದೆ.
ಇವತ್ತು, ಭಾನುವಾರ 14ರ ಬೆಳಿಗ್ಗೆ 10.10 ಸುಮಾರಿಗೆ ಉಡುಪಿಯಲ್ಲಿ ಈ ಘಟನೆ ನಡೆದಿದ್ದು, ಬಡ ಆಟೋ ಚಾಲಕರ ಮೇಲೆ ಹಲ್ಲೆ ನಡೆಸಿರುವ ಕಾರ್ಯದ ವಿರುದ್ಧ ವ್ಯಾಪಕ ಟೀಕೆ ಕೇಳಿ ಬಂದಿದೆ.

ಉಡುಪಿಗೆ ಕಾಲಿಟ್ಟರೆ ಎಚ್ಚರಿಕೆ; ಆನ್ಲೈನ್ ಏನಿದ್ದರೂ ಬೇರೆಡೆ ಇಟ್ಟುಕೊಳ್ಳಿ!
ಇನ್ಮುಂದೆ ಉಡುಪಿಗೆ ಕಾಲಿಟ್ಟರೆ ಎಚ್ಚರಿಕೆ. ನಿಮ್ಮ ಆನ್ಲೈನ್ ಏನಿದ್ದರೂ ಹೊರಗೆ ಇಟ್ಟುಕೊಳ್ಳಿ ಎಂದು ಆನ್ಲೈನ್ ಮೂಲಕ ಬಾಡಿಗೆ ಹೊಡೆಯುತ್ತಿದ್ದ ಆಟೋ ಚಾಲಕನಿಗೆ ಬೆದರಿಕೆ ಹಾಕಿದ ಘಟನೆ ನಡೆದಿದೆ. ಈ ಸಂಬಂಧಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಆನ್ಲೈನ್ ಬುಕಿಂಗ್ ಆಪ್ ಮಾಲಕರು ಎಚ್ಚೆತ್ತುಕೊಂಡಿದ್ದು, ಕಠಿಣ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿ ಇದೀಗ ಲಭ್ಯವಾಗಿದೆ.
ಈಗಾಗಲೇ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ನಾಳೆ ದೌಲತ್ತು ಮೆರೆದ ಗೂಂಡಾ ಅಟೋ ಚಾಲಕರನ್ನು ವಿಚಾರಣೆಗೆ ಕರೆದಿದ್ದಾಗಿ ಮೂಲಗಳು ತಿಳಿಸಿವೆ.
ಅದೇ ರೀತಿ, ಆನ್ ಲೈನ್ ಆ್ಯಪ್ ಸಂಸ್ಥೆಗಳ ಮಾಲೀಕರು ಈ ಘಟನೆಯನ್ನು ಗ್ರಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಗಮನಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನ ಶುರು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟೆಕ್ನಾಲಜಿಯನ್ನು ಬಳಸಿಕೊಂಡು ಆನ್ಲೈನ್ ಮೂಲಕ ಆಟೋ ಕ್ಯಾಬ್ ಬುಕ್ ಮಾಡುವ ಸಂಸ್ಥೆಗಳು ಈಗಾಗಲೇ ಸ್ಥಳೀಯ ಮತ್ತು ನಗರಗಳ ವಾಹನ ಚಾಲಕರ ವ್ಯಾಪಾರವನ್ನು ಹೆಚ್ಚಿನ ಮಟ್ಟದಲ್ಲಿ ಏರಿಸಿವೆ. ತಂತ್ರಜ್ಞಾನದ ಸದುಪಯೋಗ ಪಡೆದುಕೊಳ್ಳುವ ಬದಲು, ಅಲ್ಲಲ್ಲಿ ತಮ್ಮದೇ ಗುಂಪು ಕಟ್ಟಿಕೊಂಡು ಏಕಸ್ವಾಮ್ಯ ಮೆರೆಯುವ ಇಂತಹ ಕೃತ್ಯಗಳ ವಿರುದ್ಧ ಕಾನೂನು ಪ್ರಕಾರ ಅಗತ್ಯ ತಕ್ಷಣ ಕ್ರಮ ಕೈಗೊಳ್ಳಬೇಕು ಎನ್ನುವ ಕೂಗು ಕೇಳಿ ಬಂದಿದೆ.
Comments are closed.