ಎಲ್ಲ ಬೆಳೆಗೂ ಸರ್ಕಾರವೇ ವಿಮೆ ಕಂತು ಪಾವತಿಸಲಿ: ಸುರೇಶ್ ಬಾಬು

ಬೆಳಗಾವಿ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಧಾನ್ಯಗಳ ಖರೀದಿಗೆ ನೂರಾರು ಕೋಟಿ ರೂ. ಖರ್ಚು ಮಾಡುವ ಬದಲು ಎಲ್ಲ ಬೆಳೆಗಳಿಗೂ ವಿಮೆ ಮಾಡಿಸಿ ರಾಜ್ಯ ಸರಕಾರವೇ ಕಂತು ಪಾವತಿಸಿದರೆ ರೈತರಿಗೆ ಅನುಕೂಲ ಆಗುತ್ತದೆ. ಹೀಗೆ ಸರ್ಕಾರವೇ ಬೆಳೆಗಳಿಗೆ ವಿಮೆ ಮಾಡಿಸುವುದರಿಂದ ರೈತರು ಹಾಗೂ ಸರಕಾರಕ್ಕೂ ಅನುಕೂಲ ಆಗುತ್ತದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು ಆಗ್ರಹಿಸಿದರು.

ರಾಜ್ಯ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಂಎಸ್‌ಪಿ ಯೋಜನೆಯಡಿ ಖರೀದಿ ಮಾಡುತ್ತಿರುವುದು ಸರ್ಕಾರಕ್ಕೆ ಹೊರೆಯಾಗುತ್ತಿದೆ. ಅಲ್ಲದೆ ರೈತರಿಗೆ ಸರಿಯಾಗಿ ಮತ್ತು ಸಮಯಕ್ಕೆ ವಿಮೆ ಹಣವೂ ಸಿಗುತ್ತಿಲ್ಲ. ಹೀಗಾಗಿ ಸರಕಾರವೇ ಪ್ರೀಮಿಯಂ ಪಾವತಿಸುವ ವ್ಯವಸ್ಥೆ ರೂಪಿಸಿದರೆ, ಎಲ್ಲವೂ ಸುಸೂತ್ರ ಅಂದರು.
Comments are closed.