Sumalatha: ‘ಡೆವಿಲ್’ ರಿಲೀಸ್ ಬೆನ್ನಲ್ಲೇ ಹೊಸ ಪೋಸ್ಟ್ ಮಾಡಿದ ಸುಮಲತಾ ಅಂಬರೀಶ್

Share the Article

Sumalatha : ಕೊಲೆ ಆರೋಪದಡಿ ಜೈಲು ಪಾಲಾಗಿರುವ ದರ್ಶನ್ ಅವರ ಅನುಪಸ್ಥಿತಿಯಲ್ಲಿ ಇದೀಗ ಅವರ ಡೆವಿಲ್ ಸಿನಿಮಾ ರಿಲೀಸ್ ಆಗಿದೆ. ರಾಜ್ಯದ ಚಿತ್ರಮಂದಿರಗಳಲ್ಲಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಅಭಿಮಾನಿಗಳು ಸಂಭ್ರಮಿಸುತಿದ್ದಾರೆ. ಈ ನಡುವೆ ಸುಮಲತಾ ಅಂಬರೀಶ್ ಅವರು ಸಿನಿಮಾ ಕುರಿತು ಪೋಸ್ಟ್ ಒಂದನ್ನು ಮಾಡಿದ್ದಾರೆ.

View this post on Instagram

A post shared by Sumalatha Ambareesh (@sumalathaamarnath)

ಹೌದು, ಡೆವಿಲ್ ಸಿನಿಮಾ ರಿಲೀಸ್ ದಿನವೇ ಸುಮಲತಾ ಅಂಬರೀಶ್ (sumalatha ambareesh) ಅವರು ಪೋಸ್ಟ್ ಒಂದನ್ನು ಹಾಕಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಹಾಗೂ ಡೆವಿಲ್‌ ತಂಡಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು! ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಮತ್ತು ಅಭಿಮಾನಿಗಳ ಹೃದಯಗಳಲ್ಲಿ ಗರ್ಜಿಸಲಿ! ಬ್ಲಾಕ್ಬಸ್ಟರ್ ಯಶಸ್ಸು ಇಲ್ಲಿದೆ! ಎಂದು ಡೆವಿಲ್‌ ಪೋಸ್ಟರ್‌ ಜೊತೆ ವಿಶ್‌ ಮಾಡಿದ್ದಾರೆ.

ನಟ ದರ್ಶನ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ಇಷ್ಟು ದಿನ ಕೆಲವೇ ಕೆಲವರನ್ನು ಫಾಲೋ ಮಾಡುತ್ತಾ ಇದ್ದರು. ಆ ಪೈಕಿ ಸುಮಲತಾ, ಅಭಿಷೇಕ್ ಅಂಬರೀಷ್, ಅಭಿ ಪತ್ನಿ ಅವಿವಾ, ಪುತ್ರ ವಿನೀಶ್, ಡಿ ಕಂಪನಿ ಇದ್ದವು. ಆದರೆ, ನಂತರದಲ್ಲಿ ಎಲ್ಲರನ್ನೂ ಅನ್​ಫಾಲೋ ಮಾಡಿದ್ದರು. ದರ್ಶನ್ ಜೈಲಿನಲ್ಲಿ ಇದ್ದಾಗ ಸುಮಲತಾ ಅವರನ್ನು ನೋಡಲು ಹೋಗಿಲ್ಲ. ಈ ಎಲ್ಲ ಚರ್ಚೆಗಳ ಮಧ್ಯೆ ಈಗ ಸುಮಲತಾ ದಾಸ ದರ್ಶನ್‌ಗೆ ವಿಶ್‌ ಮಾಡಿದ್ದಾರೆ.

Comments are closed.