Viral Video : 19 ನಿಮಿಷದ ವಿಡಿಯೋ, ಲಿಂಕ್ ಶೇರ್ ಮಾಡಿದ್ರೆ 7 ವರ್ಷ ಜೈಲು ಫಿಕ್ಸ್- ಸೈಬರ್ ಸೆಲ್ ಖಡಕ್ ಎಚ್ಚರಿಕೆ

Share the Article

Viral Video : ಜೋಡಿಯೊಂದರ 19 ನಿಮಿಷದ ಖಾಸಗಿ ವಿಡಿಯೋ ಒಂದು ವೈರಲ್ ಆಗಿ ಇಂಟರ್‌ ನೆಟ್ ಜಗತ್ತಿನಲ್ಲಿ ಸಂಚಲನ ಉಂಟು ಮಾಡಿದೆ. ಈ ವಿಡಿಯೋ ವೈರಲ್ ಆದಕಾರಣ ಅನೇಕ ಅನಾಹುತಗಳು ಕೂಡ ಉಂಟಾಗಿದೆ. ಆದರೂ ಈ ವಿಡಿಯೋವನ್ನು ಅನೇಕರು ಇನ್ನು ಹಂಚಿಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ಈ ವಿಡಿಯೋವನ್ನು ಶೇರ್ ಮಾಡಿದ್ರೆ ಜೈಲು ಶಿಕ್ಷೆ ಫಿಕ್ಸ್ ಪೊಲೀಸರು ಹೇಳಿದ್ದಾರೆ.

ಹೌದು, ಎನ್‌ಸಿಬಿ ಸೈಬರ್ ಸೆಲ್ ಅಧಿಕಾರಿ ಅಮಿತ್ ಯಾದವ್ ಅವರು 19 ನಿಮಿಷಗಳ ವೈರಲ್ ವೀಡಿಯೊದ ಬಗ್ಗೆ ಸ್ಪಷ್ಟ ಹೇಳಿಕೆ ನೀಡಿದ್ದು, ವೈರಲ್ ಆಗುತ್ತಿರುವ ವೀಡಿಯೊ AI-ರಚಿತ ವೀಡಿಯೊ ಆಗಿದೆ. ಕೆಲವು ಬಳಕೆದಾರರು ಅದೇ ಕ್ಲಿಪ್‌ನ ಭಾಗ 2 ಮತ್ತು ಭಾಗ 3 ಎಂದು ಕರೆಯುವುದನ್ನು ಪ್ರಸಾರ ಮಾಡಲು ಪ್ರಾರಂಭಿಸಿದ್ದಾರೆ. ಅವುಗಳನ್ನ ಕೂಡ AI ನಿಂದ ರಚಿಸಲಾಗಿದೆ ಎಂದು ತೋರುತ್ತದೆ ಎಂದು ಅಧಿಕಾರಿ ಉಲ್ಲೇಖಿಸಿದ್ದಾರೆ..

ಅಲ್ಲದೆ ಈ ವಿಡಿಯೋವನ್ನು ಯಾರು ಕೂಡ ಶೇರ್ ಮಾಡಬೇಡಿ. ಅಶ್ಲೀಲ ಅಥವಾ ಆಕ್ಷೇಪಾರ್ಹ ವೀಡಿಯೊಗಳನ್ನ ಇಂಟರ್ನೆಟ್‌’ನಲ್ಲಿ ಹಂಚಿಕೊಳ್ಳುವುದು ಭಾರತೀಯ ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹವಾಗಿದೆ. ಐಟಿ ಕಾಯ್ದೆಯ ಸೆಕ್ಷನ್ 67 ರ ಅಡಿಯಲ್ಲಿ, ಅಶ್ಲೀಲ ವಿಷಯವನ್ನು ಹಂಚಿಕೊಳ್ಳುವುದು ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ. ದಂಡಕ್ಕೆ ಕಾರಣವಾಗಬಹುದು. ಸೆಕ್ಷನ್ 67A ಅಡಿಯಲ್ಲಿ, ಮೊದಲ ಬಾರಿಗೆ ಲೈಂಗಿಕವಾಗಿ ಸ್ಪಷ್ಟವಾದ ವಿಷಯವನ್ನು ಹಂಚಿಕೊಳ್ಳುವುದರಿಂದ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ. ದಂಡ ವಿಧಿಸಬಹುದು. ಇನ್ನು ಸೆಕ್ಷನ್ 67A ಅಡಿಯಲ್ಲಿ ಪುನರಾವರ್ತಿತ ಅಪರಾಧವು ಏಳು ವರ್ಷಗಳ ಜೈಲು ಶಿಕ್ಷೆಗೆ ಕಾರಣವಾಗಬಹುದು. ಈ ಕ್ರಮಗಳು ಐಪಿಸಿ ಸೆಕ್ಷನ್ 292, 293 ಮತ್ತು 354C ಅಡಿಯಲ್ಲಿ ಶಿಕ್ಷಾರ್ಹವಾಗಿವೆ ಎಂದು ತಿಳಿಸಿದ್ದಾರೆ.

Comments are closed.