Shabarimala: ಶಬರಿಮಲೈ – ಪೊಂಗಲ್ ಪ್ರಯುಕ್ತ ವಿಶೇಷ ರೈಲುಗಳ ಸೇವೆ ವಿಸ್ತರಣೆ

Shabarimala: ಶಬರಿಮಲೆ ಋತುವಿನಲ್ಲಿ ಮತ್ತು ಮುಂಬರುವ ಪೊಂಗಲ್ ಹಬ್ಬದ ಸಮಯದಲ್ಲಿ ಭಕ್ತರಿಂದ ಹೆಚ್ಚಿನ ಪ್ರಯಾಣದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು ಸೇವೆಗಳ ಅವಧಿಯನ್ನು ಮುಂದುವರಿಸಲಾಗುತ್ತಿದೆ.

1. ರೈಲು ಸಂಖ್ಯೆ 07313 ಎಸ್‌ಎಸ್‌ಎಸ್ ಹುಬ್ಬಳ್ಳಿ – ಕೊಲ್ಲಂ ವಿಶೇಷ ರೈಲು, ಈ ಹಿಂದೆ 28.12.2025ರವರೆಗೆ ಓಡಲಿದೆ ಎಂದು ತಿಳಿಸಲಾಗಿತ್ತು. ಆದರೆ, ಈ ಸೇವೆಯನ್ನು ಈಗ 04.01.2026 ರಿಂದ 25.01.2026 ರವರೆಗೆ ಮುಂದುವರಿಸಲಾಗುವುದು. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ರೈಲು ಕೊಲ್ಲಂಗೆ ಹಿಂದಿನ ಆಗಮನದ ಸಮಯ 12:55 ಗಂಟೆಯ ಬದಲಿಗೆ 13:15 ಗಂಟೆಗೆ ಆಗಮಿಸಲಿದೆ.
2. ರೈಲು ಸಂಖ್ಯೆ 07314 ಕೊಲ್ಲಂ – ಎಸ್‌ಎಸ್‌ಎಸ್ ಹುಬ್ಬಳ್ಳಿ ವಿಶೇಷ ರೈಲು, ಈ ಹಿಂದೆ 29.12.2025ರವರೆಗೆ ಓಡುವುದಾಗಿ ತಿಳಿಸಲಾಗಿತ್ತು. ಈ ರೈಲು ಈಗ 05.01.2026 ರಿಂದ 26.01.2026ರವರೆಗೆ ಕಾರ್ಯನಿರ್ವಹಿಸಲಿದೆ.
3. ರೈಲು ಸಂಖ್ಯೆ 06523 SMVT ಬೆಂಗಳೂರು – ತಿರುವನಂತಪುರಂ ಉತ್ತರ ವಿಶೇಷ ರೈಲು, ಈ ಹಿಂದೆ 29.12.2025ರವರೆಗೆ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಲಾಗಿತ್ತು. ಈ ಸೇವೆಯನ್ನು ಈಗ 05.01.2026 ರಿಂದ 26.01.2026ರವರೆಗೆ ಮುಂದುವರಿಸಲಾಗುವುದು.
4. ರೈಲು ಸಂಖ್ಯೆ 06524 ತಿರುವನಂತಪುರಂ ಉತ್ತರ – SMVT ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ, ಈ ಹಿಂದೆ 30.12.2025ರವರೆಗೆ ಕಾರ್ಯನಿರ್ವಹಿಸಲಿದೆ ಎಂದು ಸೂಚಿಸಲಾಗಿತ್ತು. ಈ ರೈಲು ಈಗ 06.01.2026 ರಿಂದ 27.01.2026 ರವರೆಗೆ ಕಾರ್ಯನಿರ್ವಹಿಸಲಿದೆ.
5. ರೈಲು ಸಂಖ್ಯೆ 06547 SMVT ಬೆಂಗಳೂರು – ತಿರುವನಂತಪುರಂ ಉತ್ತರ ವಿಶೇಷ ರೈಲು, ಈ ಹಿಂದೆ 25.12.2025ರವರೆಗೆ ಕಾರ್ಯನಿರ್ವಹಿಸಲಿದೆ ಎಂದು ಸೂಚಿಸಲಾಗಿತ್ತು. ಈ ರೈಲು ಈಗ 01.01.2026 ರಿಂದ 29.01.2026 ರವರೆಗೆ ಕಾರ್ಯನಿರ್ವಹಿಸಲಿದೆ.
6. ರೈಲು ಸಂಖ್ಯೆ 06548 ತಿರುವನಂತಪುರಂ ಉತ್ತರ – SMVT ಬೆಂಗಳೂರು ವಿಶೇಷ ರೈಲು, ಈ ಹಿಂದೆ 26.12.2025ರವರೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಈ ಸೇವೆ ಈಗ 02.01.2026 ರಿಂದ 30.01.2026ರವರೆಗೆ ಚಲಿಸಲಿದೆ.
7. ರೈಲು ಸಂಖ್ಯೆ 06555 SMVT ಬೆಂಗಳೂರು – ತಿರುವನಂತಪುರಂ ಉತ್ತರ ವಿಶೇಷ ರೈಲು, 26.12.2025ರವರೆಗೆ ಅಧಿಸೂಚನೆ ಹೊರಡಿಸಲಾಗಿತ್ತು ಮತ್ತು ಈಗ 02.01.2026 ರಿಂದ 30.01.2026ರವರೆಗೆ ಚಲಿಸಲಿದೆ.
8. ರೈಲು ಸಂಖ್ಯೆ 06556 ತಿರುವನಂತಪುರಂ ಉತ್ತರ – SMVT ಬೆಂಗಳೂರು ವಿಶೇಷ ರೈಲು, ಈ ಹಿಂದೆ 28.12.2025 ರವರೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಈ ರೈಲು ಈಗ 04.01.2026 ರಿಂದ 01.02.2026ರವರೆಗೆ ಚಲಿಸಲಿದೆ.ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, SMVT ಬೆಂಗಳೂರು ತಲುಪುವುದು ಹಿಂದಿನ 07:30 ಗಂಟೆಯ ಬದಲು 08:15 ಗಂಟೆಗೆ ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
Comments are closed.